Belagavi NewsBelgaum NewsCrimeKannada NewsKarnataka News

*ಮಿರಜ-ಕ್ಯಾಸಲರಾಕ್ ರೈಲಿನ ಮುಂದೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ರೋಡ – ಘಟಪ್ರಭಾ ರೈಲು ನಿಲ್ದಾಣಗಳ ಮದ್ಯ ಏ. 27 ರಂದು ಚಲಿಸುತ್ತಿರುವ ಮಿರಜ ಕ್ಯಾಸಲರಾಕ್ ರೈಲು ಗಾಡಿಯ ಮುಂದೆ ಅಪರಿಚಿತ ವ್ಯಕ್ತಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೃತನ ಚಹರೆ: 60-65 ವಯಸ್ಸು, 5′-4″ ಅಡಿ ಎತ್ತರ, ಕೆಂಪು ಮೈ ಬಣ್ಣ, ಮೈಯಿಂದಾ ತೆಳ್ಳಗೆ, ದುಂಡು ಮುಖ, ದುಂಡ ಮೂಗು, ತಲೆಯಲ್ಲಿ ಸಣ್ಣಗೆ ಕಪ್ಪು ಬಿಳಿ ಕೂದಲು, ಸಣ್ಣಗೆ ಮೀಸೆ ದಾಡಿ ಬಿಟ್ಟಿರುತ್ತಾನೆ. ನಡದಲ್ಲಿ ಬಿಳಿ ಉಡದಾರ, ಎಡಗಾಲಿನಲ್ಲಿ ಕಪ್ಪು ದಾರ ಇರುತ್ತದೆ ಹಾಗೂ ಬಿಳಿ ಬಣ್ಣದ ಪುಲ್ ಶರ್ಟ, ಬಿಳಿ ಮುಂಡಿ ಚಾಟ ಬನಿಯನ್, ಬಿಳಿ ಪಾಯಜಾಮ್, ಒಂದು ಬಿಳಿ ಗಾಂಧಿ ಟೋಪಿ, ಧರಿಸಿರುತ್ತಾನೆ.

Home add -Advt

ಈ ಚಹರೆ ಪಟ್ಟಿ ಹೋಲುವ ವ್ಯಕ್ತಿ ಕಾಣೆಯಾದ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅಥವಾ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (0831) 2405273 ಪಿ.ಎಸ್.ಐ ಮೊಬೈಲ ನಂ. 9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (080) 22871291 ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button