Latest

ದುರಂತ ಸಾವಿಗೆ ಮೊದಲು ಸೆಲ್ಫಿ ಕ್ಲಿಕ್ಕಿಸಿದ್ದ ಮಾಸ್ಕೋ ಟ್ರಾವೆಲ್ ಬ್ಲಾಗರ್

ಪ್ರಗತಿವಾಹಿನಿ ಸುದ್ದಿ ಕಠ್ಮಂಡು: ಪೊಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ವಿಮಾನ ದುರಂತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಮಾಸ್ಕೋ ಟ್ರಾವೆಲ್ ಬ್ಲಾಗರ್ ಎಲೆನಾ ಬಂಡುರೊ (33) ಅವರು  ತಮ್ಮ ಪ್ರವಾಸದ ಬಗ್ಗೆ ಉತ್ಸುಕತೆಯ ಪೋಸ್ಟ್ಅಪ್‌ಲೋಡ್ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ವಿಮಾನದಲ್ಲಿ ತಮ್ಮ ಸೆಲ್ಫಿ ತೆಗೆದುಕೊಂಡು, ಇಂಗ್ಲಿಷ್‌ನಲ್ಲಿ “Go to Nepal” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅವರು ದುರಂತ ಸಾವು ಕಂಡಿದ್ದಾರೆ.

Home add -Advt

ಎಲೆನಾ ಅವರ ಸಾಮಾಜಿಕ ಮಾಧ್ಯಮ ಇಂದು ಸಂತಾಪ ಸಂದೇಶಗಳಿಂದ ತುಂಬಿಹೋಗಿದೆ. ಮತ್ತು ಅವರನ್ನು “ನಮಗೆ ಗೊತ್ತಿರುವ ಪ್ರಕಾಶಮಾನವಾದ, ಕರುಣಾಮಯಿ ಆತ್ಮ” ಎಂದು ಜಾಲತಾಣಿಕರು ಭಾರ ಹೃದಯದಿಂದಲೇ ಬಣ್ಣಿಸಿದ್ದಾರೆ.

ವಿಕ್ಟೋರಿಯಾ ಅಲ್ಟುನಿನಾ, ಯೂರಿ ಲುಗಿನ್ ಮತ್ತು ವಿಕ್ಟರ್ ಲಾಗಿನ್ ಎಂದು ಹೆಸರಿಸಲಾದ ಇತರ ಮೂವರು ರಷ್ಯನ್ನರು ವಿಮಾನದಲ್ಲಿ ಮೃತಪಟ್ಟಿದ್ದಾರೆ.

Related Articles

Back to top button