Belagavi NewsBelgaum NewsKannada NewsKarnataka NewsPolitics
ನಿಯತಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಿದ ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಭಾವಂತ ಬಡ ವಿದ್ಯಾರ್ಥಿಗೆ ನಿಯತಿ ಫೌಂಡೇಶನ ವತಿಯಿಂದ 6000 ರೂ ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಯಿತು.
ಅರುಷ್ ಅಷ್ಟೇಕರ್ ವಿದ್ಯಾರ್ಥಿ ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡ ಆತ ಅಜ್ಜ-ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ. ಹಾಗಾಗಿ ಇಂದು ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಚೆಕ್ ಹಸ್ತಾಂತರಿಸಿದರು.
ಈ ವೇಳೆ ಗೀತಾಂಜಲಿ ಚೌಗುಲೆ, ವನಿತಾ ಹುಂಡಾರೆ, ವೃಶಾಲಿ ಮೋರೆ, ಆಶಾರಾಣಿ ನಿಂಬಾಳಕರ, ದೀಪಾಲಿ ಮಾಲಕರಿ ಉಪಸ್ಥಿತರಿದ್ದರು.