ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನಗಳ ನಾಟಕೋತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ವಿನುತಾ ಶ್ರೇಯಾ ಪ್ರಕಾಶನ ಹಾಗು ರಂಗಸೃಷ್ಟಿ ಸಂಯುಕ್ತವಾಗಿ ಆಯೋಜಿಸಿರುವ ನಾಟಕಕಾರ ಡಾ.ಡಿ.ಎಸ್.ಚೌಗಲೆ ಅವರ ಎರಡು ದಿನಗಳ ನಾಟಕೋತ್ಸವ ಸೆಪ್ಟೆಂಬರ್ ೯ ಮತ್ತು ೧೦, ೨೦೨೩ ರಂದು ಸಂಜೆ ೭ ಗಂಟೆಗೆ ರಾಮದೇವ ಹೊಟೆಲ್ ಸಮೀಪವಿರುವ ಕನ್ನಡ ಭವನ ರಂಗಮಂದಿರದಲ್ಲಿ ನಡೆಯಲಿದೆ.
ಶನಿವಾರ ದಿ: ೯ ಸೆಪ್ಟೆಂಬರ್ ೨೦೨೩ ರ ಸಂಜೆ ೭ ಕ್ಕೆ ನುಡಿರಂಗ ಮೈಸೂರು ಪ್ರಸ್ತುತ ಪಡಿಸುವ, ನುಡಿ ಸುದರ್ಶನ ಅಭಿನಯದ ಏಕವ್ಯಕ್ತಿ ರಂಗ ಪ್ರಸ್ತುತಿ ’ಸಕುಬಾಯಿ-ಕಾಮ್ ವಾಲಿ’ ನಾಟಕ ಪ್ರಯೋಗವಾಗಲಿದೆ. ನಾದಿರಾ ಜಹೀರ್ ಬಬ್ಬರ್ ಅವರ ಮೂಲ ಹಿಂದಿ ನಾಟಕವನ್ನು ಕನ್ನಡಕ್ಕೆ ಡಾ.ಡಿ.ಎಸ್.ಚೌಗಲೆ ಅವರು ತಂದಿರುವರು. ವಿನ್ಯಾಸ-ನಿರ್ದೇಶನ ಖ್ಯಾತ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಅವರದು. ಸಂಗೀತ ನಿರ್ವಹಣೆ ಉಮೇಶ್ ಸಾಲಿಯಾನ್ ಅವರದಾಗಿದೆ.
ರವಿವಾರ ದಿ: ೧೦ ಸೆಪ್ಟೆಂಬರ್ ೨೦೨೩ ರ ಸಂಜೆ ೭ ಕ್ಕೆ ಕೆ.ವಿ.ಸುಬ್ಬಣ್ಣ ರಂಗ ಸಮೂಹ, ಹೆಗ್ಗೋಡು ನಾಡ ಚಾವಡಿಯ ಏಕವ್ಯಕ್ತಿ ರಂಗ ಪ್ರಸ್ತುತಿ, ಶ್ರೀಮತಿ ಎ.ಎಸ್.ಶೈಲಜಾ ಪ್ರಕಾಶ್ ಅಭಿನಯಿಸುವ ’ಸಾವಿತ್ರಿಬಾಯಿ ಫುಲೆ’ ನಾಟಕ ನಡೆಯಲಿದೆ. ರಚನೆ ಡಾ.ಡಿ.ಎಸ್.ಚೌಗಲೆ ಅವರದ್ದು. ಝೀ ಕನ್ನಡ ಡ್ರಾಮಾ ಜ್ಯುನಿಯರ್ ಖ್ಯಾತಿಯ ಹೆಸರಾಂತ ರಂಗ ನಿರ್ದೇಶಕ ಮಂಜುನಾಥ ಎಲ್.ಬಡಿಗೇರ ಈ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.
’ಸಕುಬಾಯಿ-ಕಾಮ್ ವಾಲಿ’ ನಾಟಕದ ಉದ್ಘಾಟನೆಯನ್ನು ಶನಿವಾರ ದಿ: ೯ ಸೆಪ್ಟೆಂಬರ್ ೨೦೨೩ ರ ಸಂಜೆ ೭ ಕ್ಕೆ ಮಹಿಳಾ ಕಾರ್ಮಿಕರಾದ ಶ್ರ್ರೀಮತಿ ಹನುಮವ್ವ ದೊಡಮನಿ ಅವರು ನೆರವೇರಿಸಲಿದ್ದಾರೆ. ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ, ಖ್ಯಾತ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ನಾಟಕಕಾರ ಡಾ.ಡಿ.ಎಸ್.ಚೌಗಲೆ, ರಂಗಕರ್ಮಿ ಶಿರೀಶ ಜೋಶಿ ಅವರು ಉಪಸ್ಥಿತರಿರುವರು.
ಕೆ.ವಿ.ಸುಬ್ಬಣ್ಣ ರಂಗಸಮೂಹ, ಹೆಗ್ಗೋಡು ಪ್ರಸ್ತುತ ಪಡಿಸುವ ಶೈಲಜಾ ಎ.ಎಸ್. ಅಭಿನಯದ ’ಸಾವಿತ್ರಿಬಾಯಿ ಫುಲೆ’ ನಾಟಕದ ಉದ್ಘಾಟನೆಯನ್ನು ರವಿವಾರ ದಿ: ೧೦ ಸೆಪ್ಟೆಂಬರ್ ೨೦೨೩ ರ ಸಂಜೆ ೭ ಕ್ಕೆ . ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆ ಹಾಗು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಲ. ಜಾರಕಿಹೊಳಿ ಅವರು ಉದ್ಘಾಟಿಸುವರು.
ಸಂಪರ್ಕ: ೯೪೪೮೨ ೩೧೭೪೮, ೬೩೬೪೮ ೪೬೨೯೩, ೯೪೪೮೬ ೩೭೭೯೭
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ