ಪ್ರಗತಿವಾಹಿನಿ ಸುದ್ದಿ, ಲಕ್ನೋ: ಫ್ಲಿಪ್ ಕಾರ್ಟ್ ನಲ್ಲಿ ವಾಚು ಆರ್ಡರ್ ಮಾಡಿದ ಮಹಿಳೆಗೆ ಹಸುವಿನ ಸೆಗಣಿ ಕಳುಹಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ನೀಲಂ ಯಾದವ ಎಂಬ ಮಹಿಳೆ 1,304 ರೂ. ಬೆಲೆಯ ರಿಸ್ಟ್ ವಾಚ್‌ಗಾಗಿ ಆರ್ಡರ್ ಮಾಡಿದ್ದರು. ನಿಗದಿತ ದಿನ ಡೆಲಿವರಿ ಪಡೆಯಲು ಕಾತುರದಿಂದ ಕಾದು ಕುಳಿತಿದ್ದ ಅವರು, ಕೈಗೆ ಸಿಕ್ಕಿದ ಪಾರ್ಸಲ್ ಬಿಡಿಸಿ ನೋಡಿದಾಗ ದಂಗಾಗಿದ್ದಾರೆ.
ಫ್ಲಿಪ್‌ಕಾರ್ಟ್ ಪ್ಯಾಕೇಜ್‌ನಲ್ಲಿ ವಾಚಿನ ಬದಲಿಗೆ ಹಸುವಿನ ಸೆಗಣಿ ಕಳುಹಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಇರಿಸಿದ್ದ ವಾಚ್ ಗಾಗಿ ಆರ್ಡರ್ ಮಾಡಿದ್ದರು.
ಮಹಿಳೆಯ ಸಹೋದರ ರವೀಂದ್ರ ಅವರು ದೂರು ಇತ್ಯರ್ಥಪಡಿಸಲು ಬೆನ್ನು ಬಿದ್ದ ನಂತರ ಡೆಲಿವರಿ ಎಕ್ಸಿಕ್ಯೂಟಿವ್ ಹಣ ಹಿಂದಿರುಗಿಸಿ ತಾವು ಡೆಲಿವರಿ ಮಾಡಿದ್ದ ಸೆಗಣಿ ಪಾರ್ಸಲ್ ಪುನಃ ಸಂಗ್ರಹಿಸಿದ್ದಾಗಿ ಮಹಿಳೆ ಹೇಳಿದ್ದಾರೆ.
ರೈಲ್ವೆ ಮೇಲ್ಸೆತುವೆ ಉದ್ಘಾಟನೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ