*ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಆಹಾರದಲ್ಲಿ ವಿಷ ಹಾಕಿರುವ ಅನುಮಾನ: ಶಾಸಕ ಬೆಲ್ಲದ್ ಸ್ಫೋಟಕ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒಂದೆಡೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಇತ್ತ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸ್ವಾಮೀಜಿ ಆಹಾರದಲ್ಲಿ ವಿಷ ಹಾಕಿ ನೀಡಿರುವ ಅನುಮಾನ ವ್ಯಕ್ತವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮೊನ್ನೆ ಫೋನ್ ಮಾಡಿದ್ದರು. ಆಹಾದಲ್ಲಿ ವಿಷ ಹಾಕಿರುವ ಸಂಶಯವಿದೆ ಎಂದು ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯನ್ನು ಮುಗಿಸಲು ಸಂಚು ನಡೆದಿದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಪಂಚಮಸಾಲಿ ಮಠಕ್ಕೆ ಬೀಗ ಹಾಕಲಾಗಿತ್ತು. ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸ್ವಾಮೀಜಿ ಮಠಕ್ಕೆ ಮರಳಿದ್ದರು. ಅಲ್ಲಿ ನಡೆಯುವ ಬೆಳವಣಿಗೆ ಗಮನಿಸಲು ಕೆಲವರು ಮುಸ್ಲಿಂ ಯುವಕರನ್ನು ಬಿಟ್ಟಿದ್ದಾರೆ. ಲಿಂಗಾಯತ ಮಠದಲ್ಲಿ ಮುಸ್ಲಿಂ ಯುವಕರಿಗೆ ಏನು ಕೆಲಸ? ಇಬ್ಬರು ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರು. ಇದನ್ನು ಕಂಡ ಭಕ್ತರು ಅಸಮಾಧಾನ ವ್ಯಕ್ತಪಡಿಸಿ ಅವರನ್ನು ಹೊರ ಕಳುಹಿಸಿದ್ದರು. ಬಳಿಕ ಸ್ವಾಮೀಜಿ ಊಟ ಮಾಡಿದ್ದಾರೆ. ಅಂದೇ ಅವರು ಅಸ್ವಸ್ಥರಾಗಿದ್ದಾರೆ. ಊಟದಲ್ಲಿ ವಿಷ ಹಾಕಿರುವ ಅನುಮಾನವಿದೆ ಎಂದು ಸ್ವಾಮೀಜಿಗಳೇ ನನ್ನ ಬಳಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.