Kannada NewsKarnataka NewsLatest

ಸವದತ್ತಿ ಬಳಿ ಅಪಘಾತ: ಇಬ್ಬರು ಬಲಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ -ಬಸ್ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹಾಯ್ದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ.

ಸವದತ್ತಿ ಸಮೀಪ ಈ ಘಟನೆ ನಡೆದಿದೆ. ಸವದತ್ತಿ ಯಲ್ಲಮ್ಮ ಜಾತ್ರೆಗೆ ಬಂದಿದ್ದ ಭಕ್ತರು ನಡೆದುಕೊಂಡು ಹೋಗುತ್ತಿರುವಾಗ ಇಳಿಜಾರಿನಲ್ಲಿ ಬಸ್ ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ . ಇದರಿಂದಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದರೆ, ಕೆಲವರು ಗಾಯಗೊಂಡರು. ಬಸ್ ದರೆಗೆ ಗುದ್ದಿ ಜಖಂಗೊಂಡಿದೆ.

ಜೋಗುಳಬಾವಿ ಹತ್ತಿರ ಈ ಅವಘಡ ಸಂಭವಿಸಿದೆ. ಬಸ್ ಧಾರವಾಡಕ್ಕೆ ಹೋಗುತ್ತಿತ್ತು. ಬೆಳಗಾವಿಯ ನಿಖಿತಾ(24)  ಹಾಗೂ ಬಸವರಾಜ (35) ಎನ್ನುವವರು ಸಾವಿಗೀಡಾಗಿದ್ದಾರೆ.

ಸವದತ್ತಿಯಲ್ಲಿ ಕಳೆದ ಎರಡು ದಿನ ನಡೆದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಜಾತ್ರೆ ಮುಗಿಸಿ ಸಾಲು ಸಾಲು ಜನರು ಹೊಗುತ್ತಿದ್ದರು. ಇದೇ ವೇಳೆ ಬಸ್ ಅಪಘಾತ ಸಂಭವಿಸಿದೆ.

Home add -Advt

Breakdown Govt Bus Runs on Pack of Yellamma Devotees, 2 Killed in the Mishap

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button