ಗ್ರಾಮೀಣ ಕ್ಷೇತ್ರಕ್ಕೆ ಇನ್ನಷ್ಟು ಬೃಹತ್ ಯೋಜನೆಗಳನ್ನು ತರಲು ಕ್ರಮ – ಮೃಣಾಲ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ವಿನಾಯಕ ನಗರ ಹಾಗೂ ವಿಜಯ ನಗರದ ರಸ್ತೆ, ಪುಟ್ಪಾತ್ ಹಾಗೂ ಒಳಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ ಪೂಜೆ ನಡೆಸುವ ಮೂಲಕ ಕಾಮಗಾರಿಗೆ ವಿದ್ಯುಕ್ತ ಚಾಲನೆನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃಣಾಲ ಹೆಬ್ಬಾಳಕರ್, ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ನಿರಂತರ. ಕ್ಷೇತ್ರದ ಎಲ್ಲ ಭಾಗಗಳಲ್ಲಿ ಒಂದಿಲ್ಲೊಂದು ಅಭಿವೃದ್ಧಿ ಯೋಜನೆ ನಡೆಯುತ್ತಲೇ ಇರುತ್ತವೆ. ರಸ್ತೆ, ನೀರು, ಶಾಲೆ, ದೇವಸ್ಥಾನಗಳ ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಯುವಜನತೆಗೆ ಉದ್ಯೋಗ ನೀಡುವಂತಹ ಯೋಜನೆಗಳನ್ನು ತರಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಯೋಜನೆ ಹಾಕಿಕೊಂಡಿದ್ದಾರೆ, ಆ ಕುರಿತು ಈಗಾಗಲೆ ಪ್ರಯತ್ನ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ರಾಹುಲ್ ಉರನಕರ್, ವಿಠ್ಠಲ ದೇಸಾಯಿ, ಬಿ.ಬಿ ಪಾಟೀಲ, ಪ್ರವೀಣ ಪಾಟೀಲ, ಗಜಾನನ ಬಾಂಡೇಕರ್, ಸೀಮಾ ದೇವಕರ್, ಪ್ರೇರಣಾ ಮಿರಜಕರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ