*ಕಾಲು ಮುರಿದುಕೊಂಡ ನಟಿ ರಶ್ಮಿಕಾ ಮಂದಣ್ಣ*
ಪ್ರಗತಿವಾಹಿನಿ ಸುದ್ದಿ : ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಕಾಲಿನ ಮೂಳೆ ಮುರಿತವಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸ್ವತಃ ರಶ್ಮಿಕಾ ಮಂದಣ್ಣ ಅವರೆ ಹಂಚಿಕೊಂಡಿದ್ದಾರೆ.
ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಸದ್ಯ ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ರೆಸ್ಟ್ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ಸದ್ಯ ಅವರ ಹೆಲ್ತ್ ಅಪ್ಲೇಟ್ ನೀಡಿದ್ದಾರೆ. ಇನ್ಸಾಗ್ರಾಮ್ ನಲ್ಲಿ ಅವರ ಕಾಲಿನ ಎಕ್ಸರೇ ಫೋಟೋ ಶೇರ್ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಕಾಲಿಗೆ 3 ಫ್ರಾಕ್ಟರ್ ಆಗಿದೆ. ಕಳೆದ 2 ವಾರದಿಂದ ನನ್ನ ಕಾಲನ್ನು ನೆಲದ ಮೇಲೆ ಊರಿಲ್ಲ. ನನ್ನ ಸ್ವಂತ ಕಾಲಿನ ಮೇಲೆ ನಡೆಯುವುದನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದಿದ್ದಾರೆ. ರಶ್ಮಿಕಾ ಶೇರ್ ಮಾಡಿರುವ ಫೋಟೋ ದಲ್ಲಿ ಕಾಲು ಮೂಳೆ ಮುರಿದಿರೋದು ಸ್ಪಷ್ಟವಾಗಿ ಕಾಣಿಸಿದೆ.
ಅಲ್ಲದೆ, ಆರೋಗ್ಯ ತುಂಬಾ ಮುಖ್ಯ ಎಲ್ಲರೂ ನಿಮ್ಮನ್ನ ನೀವು ತುಂಬಾ ಕೇರ್ ಮಾಡಿಕೊಳ್ಳಿ ಎಂದು ರಶ್ಮಿಕಾ ಹೇಳಿದ್ದಾರೆ. ಕೊಡಗು ಮೂಲದ ರಶ್ಮಿಕಾ ಮಂದಣ್ಣ ಸದ್ಯ ಭಾರತದ ಟಾಪ್ ಹೀರೊಯಿನ್ ಗಳಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಅಪಾರ ಫ್ಯಾನ್ಸ್ ಹೊಂದಿದ್ದಾರೆ. ಪುಷ್ಪಾ 2 ಸಿನಿಮಾ ಬಳಿಕ ಜಿಮ್ ನಲ್ಲಿ ವರ್ಕ್ ಔಟ್ ಮಾಡಬೇಕಿದ್ರೆ ಕಾಲು ಮುರಿದುಕೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ