Latest

ಆಟವಾಡುತ್ತ ಅಡಿಕೆ ನುಂಗಿದ ಮಗು; ದುರಂತ ಅಂತ್ಯ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಡಿಕೆಯನ್ನು ನುಂಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ.

ಒಂದು ವರ್ಷದ ನಿಶಾನ್ ಮೃತ ಬಾಲಕ. ಆಟವಾಡುತ್ತ ಅಡಿಕೆ ಬಾಯಿಗೆ ಹಾಕಿದ ಮಗು ನುಂಗಿಬಿಟ್ಟಿದೆ. ಉಸಿರಾಡಲಾಗದೇ ತೊಂದರೆ ಅನುಭವಿಸುತ್ತಿದ್ದ ಮಗುವನ್ನು ತಕ್ಷಣ ಶಿವಮೊಗ್ಗ ಜೆ.ಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ.

Home add -Advt

ಮೃತ ಬಾಲಕ ಸಂದೇಶ್ ಹಾಗೂ ಅರ್ಚನಾ ದಂಪತಿ ಪುತ್ರನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ ಹೋಗಿದ್ದರು. ಇನ್ನೇನು ಮತ್ತೆ ಬೆಂಗಳೂರಿಗೆ ವಾಪಸ್ಸಾಗಬೇಕು ಎಂದು ಸಿದ್ಧತೆ ನಡೆಸಿರುವಾಗಲೇ ದುರಂತ ಸಂಭವಿಸಿದೆ.

Related Articles

Back to top button