Kannada NewsKarnataka NewsNational

*ಸರ್ವಪಕ್ಷ ನಿಯೋಗ ಭಾರತಕ್ಕೆ ವಾಪಸ್: ವಿಶೇಷ ಧನ್ಯವಾದ ಹೇಳಿದ ಮೋದಿ*

ಪ್ರಗತಿವಾಹಿನಿ ಸುದ್ದಿ: ಆಪರೇಷನ್ ಸಿಂಧೂರ್ ಬಗ್ಗೆ ವಿಶ್ವಕ್ಕೆ ಮಾಹಿತಿ ನೀಡಿಲು ತೆರಳಿದ್ದ ಸರ್ವಪಕ್ಷ ನಿಯೋಗ ಭಾರತಕ್ಕೆ ವಾಪಸ್ ಆಗಿದೆ. ಈ ಮೂಲಕ ಪಾಕಿಸ್ತಾನ ಉಗ್ರ ಮುಖವಾಡವನ್ನು ಜಗತ್ತಿನಾದ್ಯಂತ ಬಟಾ ಬಯಲು ಮಾಡಿದೆ

ಸರ್ವಪಕ್ಷದ ತಲಾ 5 ಸಂಸದರನ್ನು ಒಳಗೊಂಡ ಏಳು ನಿಯೋಗಗಳನ್ನು ವಿಶ್ವದ ವಿವಿಧ ದೇಶಗಳಿಗೆ ರವಾನಿಸಿತ್ತು. ತವರಿಗೆ ಮರಳಿದ ಸಂಸದರಿಗೆಂದೇ ಪ್ರಧಾನಿ ಮೋದಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಎಲ್ಲಾ ಸಂಸದರಿಗೂ ಧನ್ಯವಾದ ಹೇಳಿದರು.

Home add -Advt

ಈ ನಿಯೋಗ ವಿಶ್ವದ ವಿವಿಧ ದೇಶಗಳ ನಾಯಕರು, ರಾಜತಾಂತ್ರಿಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಪಹಲ್ಲಾಮ್ ದಾಳಿಯ ತೀವ್ರತೆ, ಆಪರೇಷನ್ ಸಿಂಧೂರ್ ನಡೆಸಲು ಕಾರಣವಾದ ಸನ್ನಿವೇಶಗಳು, ಭಾರತದ ಕ್ರಮಗಳು ಕೇವಲ ಭಯೋತ್ಪಾದನೆ ವಿರುದ್ಧದ ರಕ್ಷಣಾತ್ಮಕ ನಡೆ ಏನು ಎಂದು ವಿವರಿಸಿತ್ತು.

ಆಪರೇಷನ್ ಸಿಂಧೂರ ಕುರಿತು ಪಾಕಿಸ್ತಾನ ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಅಪಪ್ರಚಾರವನ್ನು ನಿರಾಕರಿಸುವ ಮೂಲಕ, ಭಾರತದ ನಿಲುವು ವಿಶ್ವಾಸಾರ್ಹವಾಗಿದೆ ಎಂದು ನಿಯೋಗ ಜಗತ್ತಿಗೆ ತಿಳಿಸಿದೆ. ಆ ಮೂಲಕ ಭಾರತದ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಕೆಲಸ ಮಾಡಲಾಗಿದೆ.

ಸರ್ವಪಕ್ಷ ಸದಸ್ಯರ ನಿಯೋಗದಲ್ಲಿ ಶಶಿ ತರೂರ್ (ಕಾಂಗ್ರೆಸ್), ರವಿಶಂಕರ್ ಪ್ರಸಾದ್ (ಬಿಜೆಪಿ), ಸಂಜಯ್ ಕುಮಾರ್ ಝಾ (ಜೆಡಿಯು), ಬೈಜಯಂತ್ ಪಂಡಾ (ಬಿಜೆಪಿ), ಕನ್ನಿಮೊಳಿ ಕರುಣಾನಿಧಿ (ಡಿಎಂಕೆ), ಸುಪ್ರಿಯಾ ಸುಳೆ (ಎನ್ ಸಿಪಿ), ಶ್ರೀಕಾಂತ್ ಏಕನಾಥ್ ಶಿಂಧೆ (ಶಿವಸೇನೆ) ಇದ್ದರು. 

Related Articles

Back to top button