Kannada NewsKarnataka NewsNational

*ಒಬ್ಬನನ್ನು ರಕ್ಷಿಸಲು ಹೋಗಿ 8 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬನಾಸ್ ನದಿಯಲ್ಲಿ 11 ಜನ ಯುವಕರ ತಂಡ ಈಜಲೆಂದು ಇಳಿದಿದ್ದಾರೆ. ಈ ವೇಳೆ ಯುವಕ ಈಜಲು ಆಗದೇ ಒದ್ದಾಡಿದ್ದಾನೆ. ಇದನ್ನು ಕಂಡ ಉಳಿದ ಸ್ನೇಹಿತರು ಆತನನ್ನು ಕಾಪಾಡಲು ಮುಂದಾಗಿದ್ದಾರೆ.

ಈ ವೇಳೆ ಕಾಲು ಜಾರಿ ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ನೀರಿಗೆ ಬಿದ್ದಿದ್ದಾರೆ. ಈ ವೇಳೆ 8 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.

25 ರಿಂದ 30 ವರ್ಷದ ಒಳಗಿನ ಸುಮಾರು 11 ಯುವಕರ ತಂಡ ಜೈಪುರದಿಂದ ಟೊಂಕ್ ಜಿಲ್ಲೆಗೆ ಪಿಕ್ನಿಕ್‌ಗಾಗಿ ಬಂದಿದ್ದರು. ಆಗ ಯುವಕರು ರಾಜಸ್ಥಾನದ ಟೊಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ.

ಈ ಘಟನೆಯಲ್ಲಿ ಎಂಟು ಯುವಕರು ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button