Kannada NewsKarnataka NewsNationalPolitics
*ನನ್ನ ವಿರುದ್ಧವು ಹನಿಟ್ರಾಪ್ ಗೆ ಯತ್ನಿಸಲಾಗಿದೆ: ಡಿಜಿ ಮತ್ತು ಐಜಿಪಿಗೆ ದೂರು ನೀಡಿದ ಎಂಎಲ್ಸಿ ರಾಜೇಂದ್ರ*

ಪ್ರಗತಿವಾಹಿನಿ ಸುದ್ದಿ: ನನ್ನ ವಿರುದ್ಧವು ಹನಿಟ್ರಾಪ್ ಗೆ ಯತ್ನಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಡಿಜಿ ಮತ್ತು ಐಜಿಪಿಗೆ ದೂರು ನೀಡಿದ್ದಾರೆ.
ಹನಿ ಟ್ರಾಪ್ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೆ ಸಚಿವ ರಾಜಣ ದೂರು ನೀಡಿದ್ದು, ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ಕೂಡ ಡಿಜಿ ಮತ್ತು ಐಜಿಪಿ ಕಚೇರಿಗೆ ಭೇಟಿ ದೂರು ನೀಡಿದ್ದಾರೆ. ನನಗೆ ಕಳೆದ ಮೂರು ತಿಂಗಳಿನಿಂದ ಹನಿಟ್ರ್ಯಾಪ್ ಯತ್ನ ನಡೆಸಿದ್ದಾರೆ. ಈ ಸಂಬಂಧ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಆದರೆ ಯಾವ ಕಾರಣಕ್ಕೆ ಈ ಯತ್ನ ನಡೆಯುತ್ತಿದೆ ಗೊತ್ತಿಲ್ಲ ಎಂದಿದ್ದಾರೆ.
ಹನಿಟ್ರ್ಯಾಪ್‌ಗೆ ಯತ್ನಿಸಿದವರು ಯಾರೆಂದು ಗೊತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಸತ್ಯಾಂಶ ಏನೇ ಇದ್ದರೂ ಹೊರಗೆ ಬರಬೇಕು. ಯಾರಿಗೂ ಈ ರೀತಿ ಆಗಬಾರದು. ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಹೇಳಿದ್ದಾರೆ.