Kannada NewsKarnataka NewsLatest
*ಸ್ಕ್ಯಾನಿಂಗ್ ಗೆ ಬಂದ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ: ರೆಡಿಯಾಲಜಿಸ್ಟ್ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಸ್ಕ್ಯಾನಿಂಗ್ ಗೆ ಬಂದ ಹೆಣ್ಣುಮಕ್ಕಳಿಗೆ ರೆಡಿಯಾಲಜಿಸ್ಟ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳುರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ರೆಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಜಯಕುಮಾರ್ ವಿರುದ್ಧ FIR ದಾಖಲಾಗಿದೆ. ಇತ್ತೀಚೆಗೆ ಮಹಿಳೆಯೊಬ್ಬರು ಹೊಟ್ಟೆನೋವೆಂದು ಪತಿಯೊಂದಿಗೆ ಸ್ಕ್ಯಾನಿಂಗ್ ಗೆ ಬಂದಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡುತ್ತಾ ಮೈ-ಕೈ, ಖಾಸಗಿ ಭಾಗಗಳನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ. ಮಹಿಳೆ ವಿರೋಧಿಸಿದಾಗ ಬೆದರಿಕೆ ಹಾಕಿ ಬಾಯ್ಬಿಡದಂತೆ ಧಮ್ಕಿ ಹಾಕಿದ್ದಾನೆ.
ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಯಿಸಿಬಿಡೋದಾಗಿ ಗದರಿದ್ದಾನೆ. ಘಟನೆಯನ್ನು ಮಹಿಳೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ತಕ್ಷಣ ಮಹಿಳೆ ಆನೇಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಆರೋಪಿ ಜಯಕುಮಾರ್ ನನ್ನು ಬಂಧಿಸದೇ ಠಾಣೆಗೆ ಕರೆಸಿ ಬಿಟ್ಟುಕಳುಹಿಸಿದ್ದಾರೆ. ಮಹಿಳೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


