Latest

 ಅನಿರುದ್ಧ ಸರಳತ್ತಾಯ ಪಟ್ಟಾಭಿಷೇಕ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಶಿರೂರು – ಅನಿರುದ್ಧ ಸರಳತ್ತಾಯರು ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿದ್ದು , ಆ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ , ವಟುವಿಗೆ ಫಲ ಪ್ರದಾನ ಹಾಗೂ (ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಪವಮಾನ ಪೂಯಮಾನ ಮಂಡಲ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ, ತಿಲಹೋಮ) ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಶೀರೂರು ಮೂಲ ಮಠದಲ್ಲಿ ನಡೆಯಿತು.

Home add -Advt

ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ದಿವಾನರಾದ ಶ್ರೀನಿವಾಸ ತಂತ್ರಿಗಳು ಹಾಗೂ ವಟುವಿನ ಪೋಷಕರಾದ ಶ್ರೀವಿದ್ಯಾ ಮತ್ತು ವಿದ್ವಾನ್ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.

Related Articles

Back to top button