Kannada NewsKarnataka NewsLatest

ಇಂದಿಗೂ ಸಿದ್ದರಾಮಯ್ಯ ದಿನಕ್ಕೆರಡು ಬಾರಿ ಮಾತನಾಡುತ್ತಾರೆ, ಅವರೇ ನಮ್ಮ ನಾಯಕ – ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದಿಗೂ ಸಿದ್ದರಾಮಯ್ಯ ದಿನಕ್ಕೆರಡು ಬಾರಿ ಮಾತನಾಡುತ್ತಾರೆ, ಅವರೇ ನಮ್ಮ ನಾಯಕ ಎಂದು ಜಲಸಂಪನ್ಮೂಲ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

Home add -Advt

ಕಾಂಗ್ರೆಸ್ ನ ಟಾಪ್ ಮೋಸ್ಟ್ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ. ಅವರನ್ನೇ ಬಿಜೆಪಿಗೆ ಕರೆತರುವ ತಯಾರಿ ನಡೆಸಿದ್ದೇನೆ. ಮನಸ್ಸು ಮಾಡಿದರೆ ಅನೇಕ ಮುಖಂಡರು, ಶಾಸಕರನ್ನು ಬಿಜೆಪಿಗೆ ತರಲಿದ್ದೇನೆ ಎಂದೂ ರಮೇಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ನಲ್ಲಿ 20 ವರ್ಷ ನನ್ನನ್ನು ಮೂಲೆಯಲ್ಲಿ ಕೂಡ್ರಿಸಿದ್ದರು. ಬಿಜೆಪಿಯಲ್ಲಿ ಅಮಿತ್ ಶಾನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರೆಗೆ ಎಲ್ಲರೂ ಕರೆದು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾನು ಇಲ್ಲಿ ಖುಷಿಯಿಂದ ಇದ್ದೇನೆ, ನಾವು ಎಲ್ಲ 17 ಶಾಸಕರೂ ಇಲ್ಲೇ ಇರುತ್ತೇವೆ ಎಂದು ಅವರು ಹೇಳಿದರು.

 

24 ಗಂಟೆಯಲ್ಲಿ ಕಾಂಗ್ರೆಸ್ ನ 5 ಶಾಸಕರನ್ನು ಬಿಜೆಪಿಗೆ ತರುತ್ತೇನೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್

Related Articles

Back to top button