Belagavi NewsBelgaum NewsKannada NewsKarnataka News

*2025-26ನೇ ಸಾಲಿನ ವಾರ್ಷಿಕ ಕ್ರೆಡಿಟ್ ಪ್ಲಾನ್ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 2024-25ರ ಸಾಲಿನ ನಾಲ್ಕನೆ ತ್ರೈಮಾಸಿಕ ಡಿಸಿಸಿ – ಡಿ ಎಲ್ ಆರ್ ಸಿ ಸಭೆಯು ಗುರುವಾರ  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. 

ಲೀಡ್ ಬ್ಯಾಂಕ್ ಬೆಳಗಾವಿ 2025-26 ಸಾಲಿನ ವಾರ್ಷಿಕ್  ಕ್ರೆಡಿಟ್ ಪ್ಲಾನ್ ಬುಕ್ಲೆಟ್ ಅನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

Related Articles

ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯವನ್ನು ತಲುಪಿಸುವ ಸಲುವಾಗಿ ಎಲ್ಲಾ ಸದಸ್ಯ ಬ್ಯಾಂಕುಗಳಿಗೆ ಎಲ್ಲಾ ಬ್ಯಾಂಕ್ ಶಾಖೆ ತೆರೆಯುವಿಕೆಯ ಅರ್ಜಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಹಾಗೂ ಬಾಕಿ ಇರುವ ಎಲ್ಲಾ ಸರ್ಕಾರಿ  ಪ್ರಾಯೋಜಿತ ಯೋಜನೆಯ ಅರ್ಜಿಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.

ಬೆಳಗಾವಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಬಾಕಿ ಇರುವ ಎಲ್ಲಾ ಸರ್ಕಾರಿ ಪ್ರಾಯೋಜಿತ ಯೋಜನೆಯ ಅರ್ಜಿಗಳನ್ನು ನಿಗದಿತ ಸಮಯದೊಳಗೆ ತೆರವುಗೊಳಿಸಲು ಸೂಚಿಸಿದರು. ಮತ್ತು “ಸುಗರ್ ಕ್ಯಾನ ಹಾರ್ವೇಸ್ಟ ಮಷಿನ್” ಸಾಲ ಪ್ರಸ್ತಾವನೆಗಳನ್ನು ನಿಗದಿತ ಸಮಯದೊಳಗೆ ಮಂಜೂರು ಮಾಡಿದ್ದಕ್ಕಾಗಿ ಆಯ್ದ ಬ್ಯಾಂಕುಗಳಿಗೆ ಪ್ರಶಂಸಿದರು.

Home add -Advt

ಸಭೆಯಲ್ಲಿ ಮಾತನಾಡಿದ ಬೆಳಗಾವಿ ಕೃಷಿ ಜಂಟಿ ನಿರ್ದೇಶಕರಾದ ಎಚ್.ಡಿ. ಕೋಳೇಕರ್ ಅವರು ಬೆಳಗಾವಿ ಜಿಲ್ಲೆ ಅಗ್ರೀಕಲ್ಚರ್  ಇನ್ ಪ್ರಾಸ್ಟ್ರಕ್ಚರ ಫಂಡ  ಯೋಜನೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ ಮತ್ತು ಫಿ ಎಮ್ ಎಫ್ ಎಮ್ ಇ  ಯೋಜನೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಸಭೆಗೆ ತಿಳಿಸಿದರು.

ಭಾರತೀಯ ರಿಸರ್ವ ಬ್ಯಾಂಕ್, ಸಹಾಯಕ ಜನರಲ್ ಮ್ಯಾನೇಜರ್ ಪ್ರಭಾಕರನ್ ಸಭೆಯಲ್ಲಿ ಆರ್ ಬಿ ಐ ಮಾರ್ಗಸೂಚಿಯ ಇತ್ತೀಚಿನ ಬದಲಾವಣೆಗಳ ಕುರಿತು ಸಭೆಗೆ ವಿವರಿಸಿದರು.

ನಬಾರ್ಡ, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಅಭಿನವ್ ಯಾದವ್ ಅವರು ಇತ್ತೀಚಿನ ನಬಾರ್ಡ ಯೋಜನೆಗಳ ಬಗ್ಗೆ ವಿವರಿಸಿದರು. 

ಜನಸುರಕ್ಷಾ ಯೋಜನೆಯಡಿ ಪಿ ಎಮ್ ಜೆ ಜೆ ಬಿ ವಾಯ್ ಮತ್ತು ಪಿ ಎಮ್ ಎಸ್ ಬಿ ವಾಯ್ ನಲ್ಲಿ ಅತ್ಯುತ್ತಮ ಸಾಧನೆಗಾಗಿ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸಭೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಭೆಯಲ್ಲಿ ಎಲ್ಲಾ ಬ್ಯಾಂಕ್ ಮತ್ತು ಲೈನ್ ಇಲಾಖೆ ಪ್ರತಿನಿಧಿಗಳು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಘೋಡಕೆ ಸಭೆಗೆ ಸ್ವಾಗತ ಕೋರಿದರು.

Related Articles

Back to top button