ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಎ.ಪಿ.ಎಮ್.ಸಿ ಪೊಲೀಸರು ದಾಳಿ ನಡೆಸಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಕೇಟ ಉಪ ವಿಭಾಗದ ಎಸಿಪಿ ಎಸ್.ಆರ್.ಕಟ್ಟಿಮನಿ ಹಾಗೂ ಎ.ಪಿ.ಎಮ್.ಸಿ ಪೊಲೀಸ್ ಠಾಣಿಯ ಸಿಬ್ಬಂದಿ ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣಿಯ ವ್ಯಾಪ್ತಿಯ ಬಾಕ್ಸೈಟ್ ರೋಡ್ ಹತ್ತಿರ ನಿಷೇದಿತ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ನಿತೀನ ಸುರೇಶ ಮಕ್ಕವಾಣಿ (ವಯಾ: 37 ವರ್ಷ ಸಾ| ಬಾಟ ರೋಡ ಸಾಯಿ ಮಂದಿರ ದೇವಸ್ಥಾನದ ಹಿಂದುಗಡೆ ಅಂಬೇಡ್ಕರ ನಗರ ಬೆಳಗಾವಿ) ಹಾಗೂ ನಯೀಮ ಅಬ್ಬಾಸ್ ಕೋಜಾ (ವಯಾ: 28 ವರ್ಷಸಾ ಅಪ್ಪು ಸುಲ್ತಾನ ನಗರ ಗೋಕಾಕ ಹಾಲ 1ನೇ ಕ್ರಾಸ್ ಅಸದಖಾನ್ ಸೊಸೈಟಿ ಬೆಳಗಾವಿ) ಬಂಧಿತರು.
ಇವರಿಂದ 1 ಕೆ.ಜಿ 400 ಗ್ರಾಂ ತೂಕದ ಗಾಂಜಾ (ಅಂದಾಜು ಬೆಲೆ 28,000 ರೂ) ವಶಪಡಿಸಿಕೊಳ್ಳಲಾಗಿದೆ.
ಮಂಜುನಾಥ ಹಿರೇಮಠ (ಪಿಐ ಎ.ಪಿ.ಎಮ್.ಸಿ ಪೊಲೀಸ್ ಠಾಣೆ) ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಸಿಪಿ ಮಾರ್ಕೇಟ ಉಪ ವಿಭಾಗ ಎಸ್,ಆರ್.ಕಟ್ಟಮನಿ, ಮಂಜುನಾಥ ಹಿರೇಮಠ ಪಿಐ ಹಾಗೂ ಸಿಬ್ಬಂದಿಗಳಾದ ಬಿ.ಕೆ ಮಿಟಗಾರ ಎ.ಎಸ್,ಐ, ಎನ್,ವಾಯ್ ಮೈಲಾಕಿ, ಎಸ್.ಜಿ ಕುಗಟೋ೪ ವಿ.ಪಿ ಬೂದನವರ, ಎಸ್.ಎಸ್ ಹಲಗಿಮನಿ, ಕೆಂಪಣ್ಣಾ ದೊಡಮನಿ, ನಾಮದೇವ ಲಮಾಣಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿಗೆ ಗಾಂಜಾ ಸಾಗಿಸುತ್ತಿದ್ದ ಖದೀಮರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ