
ಪ್ರಗತಿವಾಹಿನಿ ಸುದ್ದಿ: ಅಪಾರ್ಟ್ ಮೆಂಟ್ ನ 7ನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ದೆಹಲಿಯ ಎಂ ಆರ್ ವಿ ಶಾಲೆ ಬಳಿಯ 13ನೇ ಸೆಕ್ಟರ್ ಶಾಬಾದ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಅಪಾರ್ಟ್ ಮೆಂಟ್ ನ 7 ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿದ್ದು, ಧಗ ಧಗನೆ ಹೊತ್ತಿ ಉರಿದಿದೆ. ಕಟ್ಟಡದಿಂದ ಹೊರಬರಲಾಗದೇ ಪ್ರಾಣ ಉಳಿಸಿಕೊಳ್ಳಲು ಮೂವರು ಕಟ್ಟಡಿಂದ ಕೆಳಗೆ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.