Belagavi NewsBelgaum NewsKannada NewsKarnataka NewsLatest
*ಜಾತ್ರೆಯಲ್ಲಿ ಎರಡು ವರ್ಷದ ಅವಳಿ ಮಕ್ಕಳನ್ನು ಬಿಟ್ಟುಹೋದ ಪೋಷಕರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಂಚಲಿ ಮಾಯಕ್ಕನ ದೇವಸ್ಥಾನದ ಜಾತ್ರೆಯಲ್ಲಿ ಎರಡು ವರ್ಷದ ಅವಳಿ ಮಕ್ಕಳನ್ನು ಅವರ ಪೋಷಕರು ಬಿಟ್ಟು ಹೋಗಿದ್ದು. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಬೆಳಗಾವಿಗೆ ಒಪ್ಪಿಸಿರುತ್ತಾರೆ.
ಕುಮಾರ ಬಾಬು ಮತ್ತು ಕುಮಾರಿ ಸೋನಿ 2 ವರ್ಷದ ಅವಳಿ ಮಕ್ಕಳನ್ನು ತಾತ್ಕಾಲಿಕವಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರದಲ್ಲಿ ಅಭಿರಕ್ಷಣೆಗೆ ಇರಿಸಿದ್ದು. ಸದರಿ ಮಕ್ಕಳ ಜೈವಿಕ ಪಾಲಕರು ಯಾರಾದರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ಲಾಟ್ ನಂ.2688, ಸೆಕ್ಟರ್ ನಂ. 12, ಡಬಲ್ ರೋಡ್, ಶ್ರೀನಗರ, ಬೆಳಗಾವಿ-590016 ಇಲ್ಲಿಗೆ ಅಥವಾ ದೂರವಾಣಿ-0831-2474111 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



