Kannada NewsKarnataka NewsLatest

ಉಪ ಚುನಾವಣೆಗೆ ನೋಡಲ್ ಅಧಿಕಾರಿಗಳ ನೇಮಕ ಮತ್ತಿತರ ಪ್ರಮುಖ ಸುದ್ದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ೨೦೧೯ ರ ಕರ್ನಾಟಕ ವಿಧಾನ ಸಭಾ ಉಪ ಚುನಾವಣೆಯ ನಿಮಿತ್ಯ ಬೆಳಗಾವಿ ಜಿಲ್ಲೆಯಲ್ಲಿ ಡಿ.೫ ರಂದು ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ನಿಮಿತ್ಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಮತಕ್ಷೇತ್ರವಾರು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾದ ರಾಮನ್ ಕೆ ಅವರು ತಿಳಿಸಿದ್ದಾರೆ.
ಅಥಣಿ ಮತಕ್ಷೇತ್ರಕ್ಕೆ ವಿಜಯಪುರ ವಾಣಿಜ್ಯ ತೆರಿಗೆ ಉಪ ಆಯುಕ್ತರಾದ ವಿನಾಯಕ ಹಿರೇಮಠ್ ದೂರವಾಣಿ ಸಂಖ್ಯೆ:೯೭೪೩೫೬೪೦೫೬; ಕಾಗವಾಡ ಮತಕ್ಷೇತ್ರಕ್ಕೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಸಿ.ಎಸ್ ದಳವಾಯಿ ದೂರವಾಣಿ ಸಂಖ್ಯೆ: ೯೬೨೦೦೯೧೩೨೮; ಹಾಗೂ ಗೋಕಾಕ ಮತಕ್ಷೇತ್ರಕ್ಕೆ ಬೆಳಗಾವಿ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾದ ದ್ರಾಕ್ಷಾಯಿಣಿ ಚೌಶಟ್ಟಿ ದೂರವಾಣಿ ಸಂಖ್ಯೆ:೯೪೪೮೫೨೭೪೩೯.
ಅದೇ ರಿತಿ ಬೆಳಗಾವಿ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾದ ದ್ರಾಕ್ಷಾಯಿಣಿ ಚೌಶಟ್ಟಿ ದೂರವಾಣಿ ಸಂಖ್ಯೆ:೯೪೪೮೫೨೭೪೩೯ ಅವರನ್ನು ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳ ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಜಿಲ್ಲೆಯಲ್ಲಿ ಸಂಚರಿಸುವ ಸರಕು ಸಾಗಾಣಿಕೆದಾರರು ಖಾಸಗಿ ಬಸ್‌ನ ಮಾಲಿಕರು ಹಾಗೂ ಏಜೆಂಟರುಗಳು ವಾಣಿಜ್ಯ ಸರಕುಗಳನ್ನು ಸಾಗಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಇ-ವೇ ಬಿಲ್ಲು ಹಾಗೂ ದರ ಪಟ್ಟಿಯನ್ನು ಸರಕಿನ ಜೊತೆಯಲ್ಲಿ ಸಾಗಿಸುವುದು, ದಾಖಲೆಗಳು ಇಲ್ಲದಿರುವ ಸರಕುಗಳನ್ನು ಸಾಗಿಸದಂತೆ ಎಚ್ಚರವಹಿಸುವುದು ಮತ್ತು ತಪಾಸಣೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರವನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ವಹಿವಾಟುದಾರರು ಅಥವಾ ಬೇನಾಮಿ ವ್ಯಕ್ತಿಗಳು ತೆರಿಗೆ ವಂಚಿತ ಸರಕುಗಳನ್ನು ಸಾಗಿಸುತ್ತಿದ್ದ ಪಕ್ಷದಲ್ಲಿ ಈ ಬಗ್ಗೆ ಮಾಹಿತಿಯನ್ನು ಮತಕ್ಷೇತ್ರಗಳವಾರು ನೋಡಲ್ ಅಧಿಕಾರಿಗಳಿಗೆ ಹಾಗೂ ಮೇಲುಸ್ತುವಾರಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿದಾರರು ವಿವರಗಳನ್ನು ನೀಡಬೇಕು.
ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರು ಸಾಗಿಸುವ ಎಲ್ಲಾ ಮೌಲ್ಯದ ಸರುಕುಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ವಾಣಿಜ್ಯ ತರಿಗೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಬೆಳಗಾವಿ ಉತ್ತರ ವಲಯದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾದ ರಾಮನ್ ಕೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನವೆಂಬರ್ ೧೫ ರಂದು ಮಾಜಿ ಸೈನಿಕರ ರ‍್ಯಾಲಿ

ಮರಾಠಾ ಲಘು ಪದಾತಿದಳ ಕೇಂದ್ರವು ಮಾಜಿ ಸೈನಿಕರ ರ‍್ಯಾಲಿಯನ್ನು ನವೆಂಬರ್ ೧೫ ರಂದು ಬೆಳಿಗ್ಗೆ ೯ ರಿಂದ ೫ ಗಂಟೆಯವರೆಗೆ ಬೆಳಗಾವಿಯ ಶರ್ಕತ್ ಕ್ರೀಡಾಂಗಣದಲ್ಲಿ ನಡೆಸಲಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಹುಬ್ಬಳ್ಳಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಮಾಜಿ ಸೈನಿಕರ ರ‍್ಯಾಲಿಯಲ್ಲಿ ಭಾಗವಹಿಸಬಹುದು.
ಮಾಜಿ ಸೈನಿಕರ  ಪಿಂಚಣಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಗುರುತಿಸಿ ಪರಿಹಾರವನ್ನು ನೀಡುವುದು ಈ ರ‍್ಯಾಲಿ ಉದೇಶವಾಗಿದೆ.

ಅಪರಿಚಿತ ವ್ಯಕ್ತಿ ಸಾವು

ಚಲಿಸುವ ರೈಲಿನಿಂದ ಆಯತಪ್ಪಿ ಬಿದ್ದು ಅಪರಿಚಿತ ವ್ಯಕ್ತಿ ಓರ್ವ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಾವಿಗಿಡಾಗಿದ್ದು, ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ೬೦ ವರ್ಷದ ವ್ಯಕ್ತಿಯಾಗಿದ್ದು, ಎತ್ತರ ೫ ಫೂಟ್ ೬ ಇಂಚು, ದೇಹ ಪೂರ್ತಿ ಕೊಳೆತ ಸ್ಥಿತಿಯಲ್ಲಿ ಲಭ್ಯವಾಗಿದೆ.
ವಾರಸುದಾರರು ಯಾರಾದರು ಇದ್ದಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ಪೊಲೀಸ್ ಉಪ ನೀರಿಕ್ಷಕರ ದೂರವಾಣಿ ಸಂಖ್ಯೆ ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ಮೊಬೈಲ್ ಸಂಖ್ಯೆ ೯೪೮೦೮೦೨೧೨೭ ಸಂಪರ್ಕಿಸಬೇಕು ಎಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ಉಪ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

೨೦೧೯-೨೦ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲು ಕರ್ನಾಟಕ ಸರ್ಕಾರವು ಏಕೀಕೃತ ರಾಜ್ಯ ವಿದ್ಯಾರ್ಥಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ರಾಜ್ಯ ವಿದ್ಯಾರ್ಥಿ ತಂತ್ರಾಂಶವು ವಿದ್ಯಾರ್ಥಿಯ ಆಧಾರ್ ಜೋಡೆಣೆಗೊಂಡಿರುವು ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನದ ನಗದನ್ನು ವರ್ಗಾವಣೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ  ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ರೆಫ್ರೀಜರೇಷನ್ ಹಾಗೂ ಏರ್ ಕಂಡಿಷನರ್‌ಗಳ ದುರಸ್ತಿಯ ಉಚಿತ ತರಬೇತಿಗೆ ಹಾಗೂ ೩೦ ದಿನಗಳ ಎಲ್.ಎಂ.ವಿ ಕಾರ್ ಡ್ರೆವಿಂಗ್ ಉಚಿತ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು ೧೮ ರಿಂದ ೪೫ ವರ್ಷ ವಯೋಮಿತಿಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗ ಮಾಡಲು ಅನುಕೂಲವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ: ೯೪೮೩೪೮೫೪೮೯, ೯೪೮೨೧೮೮೭೮೦, ೦೮೨೮೪-೨೨೦೮೦೭ ನ್ನು ಸಂಪರ್ಕಿಸಲು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಫಿಕ್ ಡಿಸೈನ್ ಕ್ಷೇತ್ರದಲ್ಲಿ ಸ್ವ-ಉದ್ಯೋಗಕ್ಕಾಗಿ ತರಬೇತಿ

 

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಉದ್ದೇಶದಿಂದ ಕೌಶಲ್ಯ ಉದ್ಯೋಗ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಬೆಳಗಾವಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಗ್ರಾಫಿಕ ಡಿಸೈನ್ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಆಸಕ್ತಿಯುಳ್ಳವರು ಸಿಡಾಕ್ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರದ ಮೊದಲನೇ ಮಹಡಿ, ಖಾನಾಪೂರ ರಸ್ತೆ, ಉದ್ಯಮಬಾಗಗೆ ನೇರವಾಗಿ ಭೇಟಿಯಾಗಿ ಹೆಸರನ್ನು ನವೆಂಬರ್ ೧೬ ರೊಳಗೆ ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೧೨೪೧೪೭೪೨, ೭೪೮೩೪೫೦೬೭೯, ೯೫೯೧೩೬೬೬೨೬ ಹಾಗೂ ೮೦೭೩೪೯೪೭೭೨ ಗೆ ಸಂಪರ್ಕಿಸಬೇಕು ಎಂದು ಬೆಳಗಾವಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಜಿಸಿ-ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗೆ ತರಬೇತಿ

 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಿರುವ ಕಾಲೇಜು ಉಪನ್ಯಾಸಕರ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ (Uಉಅ-ಓಇಖಿ) ಹಾಗೂ ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ (ಎಖಈ) ಪರೀಕ್ಷೆಗಾಗಿ ಮುಂದೆ ನಡೆಯಲಿರುವ ರಾಜ್ಯ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಗೆ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕರಾಮುವಿ ಕುಲಸಚಿವರಾದ ಪ್ರೊ. ರಮೇಶ.ಬಿ ಅವರು ತಿಳಿಸಿದ್ದಾರೆ.
ಆಸಕ್ತರು ನವೆಂಬರ್ ೧೪ ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೨೧-೨೫೧೫೯೪೪, ೯೯೬೪೭೬೦೦೯೦ ಗೆ ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ರಮೇಶ್ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾಸಿರಿ ಶಿಷ್ಯವೇತನ: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ

 

೨೦೧೯-೨೦ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ, ಮೆಟ್ರಿಕ್ ನಂತರ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಹಾಗೂ ನರ್ಸಿಂಗ್ ತರಬೇತಿ ಭತ್ಯೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ನವೆಂಬರ್ ೧೦ ರಂದು ಕೊನೆಯ ದಿನವಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ಆಧಾರ ಸಂಖ್ಯೆಯನ್ನು ತಮ್ಮ ವೈಯಕ್ತಿಕ ಬ್ಯಾಂಕ ಖಾತೆಗೆ ಜೋಡಣೆ (ಸೀಡ್) ಮಾಡುವುದು ಕಡ್ಡಾಯವಾಗಿರುತ್ತದೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ನವೆಂಬರ್ ೨೦ ರೊಳಗಾಗಿ ಬ್ಯಾಂಕಿನಲ್ಲಿ ಆಧಾರ ಸಂಖ್ಯೆಯನ್ನು ತಮ್ಮ ಖಾತೆಗೆ ಜೋಡಣೆ (ಸೀಡ್) ಮಾಡಿಸಿ ತಮ್ಮ ಬ್ಯಾಂಕ ಖಾತೆ ಚಾಲನೆಯಲ್ಲಿರುವಂತೆ ನೋಡಿಕೊಳ್ಳಬೇಕು.
ಅರ್ಜಿ ಸಲ್ಲಿಸಿದ ಎಲ್ಲಾ ದಾಖಲಾತಿಗಳನ್ನು ತಾವು ಕಲಿಯುತ್ತಿರುವ ಕಾಲೇಜಿಗೆ ನೀಡುವುದು. ಆಧಾರ ಸೀಡ್ ಮಾಡದೇ ಇರುವ ಹಾಗೂ ದಾಖಲಾತಿಗಳನ್ನು ಕಾಲೇಜಿಗೆ ನೀಡದೇ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಾವತಿ ಮಾಡಲು

ಸಾದ್ಯವಾಗುವುದಿಲ್ಲ ಹಾಗೂ ಕಾಲೇಜಿನ ಪ್ರಾಂಶುಪಾಲರು ಆಸಕ್ತಿವಹಿಸಿ ವಿದ್ಯಾರ್ಥಿಗಳಿಂದ ಆಧಾರ್ ಒಪ್ಪಿಗೆ ಪತ್ರಗಳನ್ನು ಪಡೆಯಬೇಕು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ: ಡಿ.ಬಿ.ಟಿ. ಮುಖಾಂತರ ಅನುಷ್ಠಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ೨೦೧೯-೨೦ ನೇ ಸಾಲಿನ ವಿದ್ಯಾಸಿರಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳನ್ನು ಆಧಾರ ಆಧಾರಿತ ಡಿ.ಬಿ.ಟಿ. ಮುಖಾಂತರ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿರುತ್ತದೆ ಎಂದು ಖಾನಾಪೂರ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಆಧಾರ ಆಧರಿತ ಡಿ.ಬಿ.ಟಿ. ಮುಖಾಂತರ ಪಾವತಿಸಲು ಆಧಾರ ಸಂಖ್ಯೆ ಬಳಕೆಗೆ ಪ್ರತಿ ವಿದ್ಯಾರ್ಥಿಯಿಂದ ಆಧಾರ ಸಂಖ್ಯೆ ಬಳಕೆ ಒಪ್ಪಿಗೆ ಪತ್ರ ವನ್ನು ಭೌತಿಕವಾಗಿ  ನವೆಂಬರ್ ೧೪ ರೊಳಗಾಗಿ ಪಡೆಯುವಂತೆ ಬೆಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ವಿದ್ಯಾಸಿರಿ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಂದ ಆಧಾರ ಸಂಖ್ಯೆ ಬಳಕೆ ಒಪ್ಪಿಗೆ ಪತ್ರ ವನ್ನು ಭೌತಿಕವಾಗಿ  ನವೆಂಬರ್ ೧೩ ರೊಳಗಾಗಿ ಸಂಬಂಧಪಟ್ಟ ಕಾಲೇಜಿನಿಂದ ಆಧಾರ ಕನ್ಸೆಂಟ್ ಪ್ರಮಾಣ ಪತ್ರ ಪಡೆದು ವಿದ್ಯಾರ್ಥಿಗಳು ಸಹಿ ಮಾಡಿದ ಪ್ರತಿಯನ್ನು ಪ್ರಾಂಶುಪಾಲರಿಗೆ ಸಲ್ಲಿಸುವುದು ಹಾಗೂ ವಿದ್ಯಾರ್ಥಿಗಳು ತಮ್ಮ ಬ್ಯಾಂಕ ಖಾತೆಯನ್ನು ಚಾಲನೆಯಲ್ಲಿರುವಂತೆ ನೋಡಿಕೊಳ್ಳಲು ಹಾಗೂ ತಮ್ಮ ಬ್ಯಾಂಕ ಖಾತೆ ಹೊದಿರುವ ಬ್ಯಾಂಕಗಳಿಗೆ ಭೇಟಿ ನೀಡಿ ಬ್ಯಾಂಕ ಖಾತೆಗೆ ಆಧಾರ ಸಂಖ್ಯೆಯನ್ನು ನವೆಂಬರ್ ೨೦ ರೊಳಗೆ ಜೋಡಣೆ  ಮಾಡಿಸಿಕೊಳ್ಳುವಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಬೇಕು.
ಎಲ್ಲಾ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಣೆ ನೀಡಲು ಸೂಚಿಸಿದೆ. ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಕನ್ಸೆಂಟ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಖಾನಾಪೂರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button