ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ಇನ್ನಿಲ್ಲ

ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –

ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ ಜೇಟ್ಲಿ ನಿಧನರಾಗಿದ್ದಾರೆ.

ಕಳೆದ ಸುಮಾರು ಒಂದು ವರ್ಷದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.  ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಅವರು  ಆಸ್ಪತ್ರೆಗೆ ದಾಖಲಾಗಿದ್ದರು. ಅಮೇರಿಕಾದಲ್ಲೂ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

Home add -Advt

ಹಣಕಾಸು, ರಕ್ಷಣಾ ಸೇರಿದಂತೆ ಹಲವು ಖಾತೆಗಳನ್ನು ಅತ್ಯಂತ ಸಮರ್ಥವಾಗಿ ಅವರು ನಿಭಾಯಿಸಿದ್ದರು.

ಸಂಬಂಧಿಸಿದ ಸುದ್ದಿ – ಅರುಣ ಜೇಟ್ಲಿ ಆರೋಗ್ಯ ಗಂಭೀರ

ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಬಿಜೆಪಿ ಸರಕಾರವನ್ನು ಪ್ರತಿ ಸಂದರ್ಭದಲ್ಲಿ ಸಮರ್ಥಿಸಿಕೊಳ್ಳುವಲ್ಲಿ ಅರುಣ ಜೆಟ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯಲ್ಲಿದ್ದರೂ ಪಕ್ಷಾತೀತವಾಗಿ ಅವರು ಗೌರವ ಹೊಂದಿದ್ದರು.

ವಿದ್ಯಾರ್ಥಿಯಾಗಿದ್ದಾಗಲೇ ಅವರು ನಾಯಕತ್ವ ಗುಣ ಬೆೆಳೆಸಿಕೊಂಡಿದ್ದ ಅವರಿಗೆ ಕೇವಲ 67 ವರ್ಷ ವಯಸ್ಸಾಗಿತ್ತು. ಬಿಜೆಪಿಗಷ್ಟೆ ಅಲ್ಲದೆ ಇಡೀ ರಾಷ್ಟ್ರಕ್ಕೆ ಅವರ ನಿಧನ ನಷ್ಟವನ್ನುಂಟು ಮಾಡಿದೆ.

ಕರ್ನಾಟಕ ಬಿಜೆಪಿಗೆ ಅರುಣ ಜೇಟ್ಲಿ ನಿಧನ ಅತ್ಯಂತ ನಷ್ಟವನ್ನುಂಟು ಮಾಡಿದೆ. ಕೆಲವೇ ದಿನದ ಹಿಂದೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದೆ. ನಾಳೆ ಇವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುತ್ತೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button