Latest

ಸೋಲಿನ ಭೀತಿಗೆ ಕಂಗೆಟ್ಟು ಧೋನಿಗೆ ಸಿಎಸ್‌ಕೆ ನಾಕತ್ವ ಒಪ್ಪಿಸಿದ ರವೀಂದ್ರ ಜಡೇಜಾ

ಪ್ರಗತಿ ವಾಹಿನಿ ಸುದ್ದಿ ಮುಂಬೈ –

ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ  ಸೋಲಿನಿಂದ ಕಂಗೆಟ್ಟಿದೆ. ಆಡಿರುವ ಒಟ್ಟು ಎಂಟು ಪಂದ್ಯಗಳ ಪೈಕಿ ೬ರಲ್ಲಿ ಸಿಎಸ್‌ಕೆ ಸೋಲು ಕಂಡಿದೆ.

Home add -Advt

ಅಲ್ಲದೆ ತಂಡದ ನಾಕತ್ವದ ಜವಾಬ್ದಾರಿಯಿಂದಾಗಿ ತಮ್ಮ ಎಂದಿನ ಆಟವನ್ನು ಆಡಲು ಸಾಧ್ಯವಾಗುತ್ತಿಲ್ಲ ಎಂದು ನಾಯಕ ರವೀಂದ್ರ ಜಡೇಜಾ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಂಡದ ನಾಯಕತ್ವವನ್ನು ಎಂ. ಎಸ್. ಧೋನಿ ಅವರಿಗೆ ಒಪ್ಪಿಸಲು ನಿರ್ಧರಿಸಿದ್ದಾರೆ.

ನನಗೆ ನಾಯಕತ್ವದ ಜವಾಬ್ದಾರಿಯಿಂದಾಗಿ ಆಟದ ಮೇಲೆ ಫೋಕಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾಯಕತ್ವವನ್ನು ಧೋನಿಗೆ ನೀಡಿ ಎಂಬ ಜಡೇಜಾ ಕೋರಿಕೆಗೆ ಸಿಎಸ್‌ಕೆ ಒಪ್ಪಿಗೆ ನೀಡಿದೆ. ಇನ್ನೊಂದೆಡೆ ಧೋನಿ ಕೂಡ ತಂಡದ ಹಿತದೃಷ್ಟಿಯಿಂದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಿದ್ದು ಐಪಿಎಲ್ ಪಂದ್ಯಾವಳಿಗಳು ಮತ್ತಷ್ಟು ಕಳೆಗಟ್ಟುವ ನಿರೀಕ್ಷೆಯನ್ನು ಕ್ರಿಕೇಟ್ ಪ್ರೇಮಿಗಳಲ್ಲಿ ಮೂಡಿಸಿದೆ.

ಮೂರು ದಿನಗಳ ಕಾಲ ದಟ್ಟ ಅರಣ್ಯದಲ್ಲಿ ಕಳೆದ ದಿಟ್ಟ ಬಾಲಕಿ

Related Articles

Back to top button