Uncategorized

*ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ಗೋವಿನ ತಲೆ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ನಡು ರಸ್ತೆಯಲ್ಲಿ ಗೋವಿನ ತಲೆ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ನಡೆದಿದೆ.

Home add -Advt

ರಸ್ತೆ ಮೇಲೆ ಗೋವಿನ ತಲೆಯನ್ನು ದೇಹದಿಂದ ಬೇರ್ಪಡಿಸಿ ಇಟ್ಟಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊದೆಯಲ್ಲಿ ಎಸೆದಿದ್ದ ಗೋವಿನ ತಲೆಯನ್ನು ನಾಯಿಗಳು ಎಳೆದು ರಸ್ತೆಗೆ ತಂದಿರಬಹುದುಎನ್ನಲಾಗಿದೆ.

ಹೆಗಡೆಕಟ್ಟಾದಿಂದ ಕಾನಳ್ಳಿ ರಸ್ತೆಗೆ ತೆರಳುವ ಮಾರ್ಗಮಧ್ಯೆ ಗೋವಿನ ತಲೆ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button