Belagavi NewsBelgaum NewsKannada NewsKarnataka NewsPolitics

*ನಾಳೆ ರಾಜ್ಯಕ್ಕೆ ಪತ್ನಿ ಜೊತೆ ಉಪ ರಾಷ್ಟ್ರಪತಿ ಜಗದೀಪ್ ಧನಕ‌ರ್ ಭೇಟಿ*

ಪ್ರಗತಿವಾಹಿನಿ ಸುದ್ದಿ: ಉಪ ರಾಷ್ಟ್ರಪತಿ ಜಗದೀಪ್ ಧನಕ‌ರ್ ಮತ್ತು ಅವರ ಪತ್ನಿ ಸುದೇಶ್ ಧನಕರ್ ಅವರು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಳೆ ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

Home add -Advt

ಬೆಳಗಾವಿಯಲ್ಲಿ ಇಂಡಿಯನ್‌ ಕೌನ್ಸಿಲ್‌ ಫಾರ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸಿಟ್ಯೂಟ್‌ ಚ್ ಟ್ರಡಿಷನಲ್ ಮೆಡಿಸಿನ್ (ಎನ್‌ಐಟಿಎಂ) ಸಂಸ್ಥಾಪನಾ ದಿನ ಮತ್ತು ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಬಳಿಕ ಬೆಂಗಳೂರಿನ ಸಿಎಸ್ ಐಆರ್ – ಎನ್ ಎಎಲ್ ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಲಿದ್ದು, ಲಘು ಯುದ್ಧ ವಿಮಾನ (ಎಲ್ಸಿಎ) ಘಟಕಗಳು ಮತ್ತು ಸಾರಸ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್‌ಎಎಲ್) ವಿನ್ಯಾಸಗೊಳಿಸಿದ ಲಘು ಸಾರಿಗೆ ವಿಮಾನ ವಿಭಾಗದಲ್ಲಿ ಸಾರಸ್ ಮೊದಲ ಭಾರತೀಯ ಬಹುಪಯೋಗಿ ನಾಗರಿಕ ವಿಮಾನವಾಗಿದೆ.

Related Articles

Back to top button