LatestUncategorized

*ಭೀಕರ ಬೈಕ್ ಅಪಘಾತ; ಮಗನ ಕಣ್ಣೆದುರಲ್ಲೇ ಪ್ರಾಣ ಬಿಟ್ಟ ತಂದೆ*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬೈಕ್ ಗೆ ಅಪರಿಚಿತವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮಗನ ಕಣ್ಣೆದುರೇ ತಂದೆ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ನಡೆದಿದೆ.

ರೆಹಮಾನ್ ಸಾಬ್ ಮುದಗಲ್ (50) ಮೃತ ವ್ಯಕ್ತಿ. ಬಾಗಲಕೋಟೆ ನವನಗರದ ನಿವಾಸಿ. ರೆಹಮಾನ್ ಸಾಬ್ ಮಗ ಕಲಂದರ್ ಬಾಬಾನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ.

Home add -Advt

ಬೈಕ್ ನಿಂದ ಕೆಳಗೆ ಬಿದ್ದ ರೆಹಮಾನ್ ಸಾಬ್ ಮೇಲೆ ವಾಹನ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮಗನ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾರೆ.

ಅಮೀನಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/cm-basavaraj-bommaireactioncongress-govt/


Related Articles

Back to top button