Kannada News

“ಹನಿಗವನಗಳಲ್ಲಿ ಹಾಸ್ಯ” ಕಾರ್ಯಕ್ರಮ

“ಹನಿಗವನಗಳಲ್ಲಿ ಹಾಸ್ಯ” ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 13 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನ ಸಭಾಭವನದಲ್ಲಿ “ಹನಿಗವನಗಳಲ್ಲಿ ಹಾಸ್ಯ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರೀ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಕಾರ್ಯಕ್ರಮಕ್ಕೆ ಚಾಲನೆಯನ್ನು ಪೃಥ್ವಿ ಫೌಂಡೇಶನ್ ಸಂಸ್ಥಾಪಕಿ ಡಾ. ಹೇಮಾ ಸೊನೊಳ್ಳಿ ನೀಡಲಿದ್ದಾರೆ. ಸಾಹಿತ್ಯ ಭವನದ ಗೌರವ ಕಾರ‍್ಯದರ್ಶಿಗಳಾದ ಆರ್. ಬಿ. ಕಟ್ಟಿಯವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

Home add -Advt

ಪ್ರಾಯೋಜಕತ್ವವನ್ನ ಬಡಾಲ ಅಂಕಲಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಂ. ಎಫ್ ಸುಬ್ಬಾಪುರಮಠ ವಹಿಸಿಕೊಂಡಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಗಳನಾಡಲಿದ್ದಾರೆ. ಪ್ರೊ. ಜಿ. ಕೆ. ಕುಲಕರ್ಣಿ, ಅಶೋಕ ಮಳಗಲಿ ಉಪಸ್ಥಿತರಿರುತ್ತಾರೆ. ಜಿ. ಎಸ್ ಸೋನಾರ ನಿರೂಪಿಸಲಿದ್ದಾರೆ.

ಸ್ಥಳದಲ್ಲಿಯೇ ಹೆಸರನ್ನು ನೋಂದಾಯಿಸಿಕೊಂಡು ಹಾಸ್ಯಹನಿಗವನವಷ್ಟೇ ಅಲ್ಲದೇ ಹಾಸ್ಯಚುಟುಕು, ಹಾಸ್ಯಕವನ, ವಾಚನ ಮಾಡಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸದುಪಯೋಗ ಪಡೆಯುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

Related Articles

Back to top button