Kannada NewsLatest

ರಮೇಶ್ ಜಾರಕಿಹೊಳಿ ಪ್ರಕರಣದ ಸತ್ಯ ಸದ್ಯದಲ್ಲೆ ಬಹಿರಂಗ ; ಬಿ.ಸಿ.ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಉಡುಪಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸದ್ಯದಲ್ಲೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಸಚಿವರು, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಅವರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನ ಸಿಗಲಿದೆ. ಅವರ ಪ್ರಕರಣದ ಸತ್ಯ ಸದ್ಯದಲ್ಲೆ ಹೊರಬರುತ್ತೆ. ಅನಗತ್ಯವಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದರು.

Home add -Advt

ಇನ್ನು ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ವಿಚಾರವಾಗಿ ಮಾತನಾಡಿದ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಮಾತ್ರ ಸಿಎಂ ಅಭ್ಯರ್ಥಿ ಅಲ್ಲ. ಪರಮೇಶ್ವರ್ ಕೂಡ ಸದ್ದಿಲ್ಲದೇ ಸಿಎಂ ಸ್ಥಾನಕ್ಕೆ ತಯಾರಿ ನಡೆಸಿದ್ದಾರೆ. ಶಾಸಕರು ಸಿಎಂ ಸ್ಥಾನದ ಕನಸು ಕಾಣುವುದು ತಪ್ಪಲ್ಲ. ಆದರೆ ಚುನಾವಣೆಗೆ ಇನ್ನೂ ಎರಡು ವರ್ಷವಿರುವಾಗ ಈಗಲೇ ಸಿಎಂ ಅಭ್ಯರ್ಥಿ ಮಾತೇಕೇ? ಇದು ಕೂಸು ಹುಟ್ಟುವ ಮೊದಲು ತೊಟ್ಟಿಲು ಕಟ್ಟಿ ತೂಗಿದಂತಾಯ್ತು ಎಂದು ಹೇಳಿದರು.
ಬೆಳಗಾವಿ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ – ಡಿಸಿ ಆದೇಶ

Related Articles

Back to top button