Kannada NewsLatest

*ಕೌಜಲಗಿ ಹೊಸ ತಾಲೂಕು ರಚನಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶನಿವಾರದಂದು ತಾಲೂಕಿನ ಕೌಜಲಗಿ ಗ್ರಾಮದ ಬಲಭೀಮ ದೇವಸ್ಥಾನದ ಆವರಣದಲ್ಲಿ ತಾಲೂಕು ರಚನೆಗೆ ಸಂಬAಧ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿಯವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ೩೦ ವರ್ಷಗಳಿಂದ ತಾಲೂಕು ಸಂಬಂಧ ಹೋರಾಟ ಮಾಡಿಕೊಂಡು ಬರುತ್ತಿರುವ ಚಾಲನಾ ಸಮಿತಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.

ಕೌಜಲಗಿ ಹೊಸ ತಾಲೂಕು ಆಗಬೇಕೆಂಬುವುದು ಈ ಭಾಗದ ಬಹುವರ್ಷಗಳ ನಾಗರೀಕರ ಆಶಯವಾಗಿದೆ. ಹೊಸ ತಾಲೂಕು ರಚನೆ ಆಗುವುದರಿಂದ ಆಡಳಿತಾತ್ಮಕವಾಗಿ ಹಾಗೂ ಅಭಿವೃದ್ದಿ ದೃಷ್ಟಿಯಿಂದ ಅನುಕೂಲವಾಗಲಿದೆ. ಈಗಾಗಲೇ ಗೋಕಾಕ ತಾಲೂಕಿನಿಂದ ಬೇರ್ಪಟ್ಟು ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಕೌಜಲಗಿಯನ್ನು ನೂತನ ತಾಲೂಕು ಕೇಂದ್ರವಾಗಲಿಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ಎಲ್ಲರೂ ಸೇರಿ ಕೌಜಲಗಿಯನ್ನು ತಾಲೂಕಾ ರಚಿಸಲಿಕ್ಕೆ ಪ್ರಯತ್ನ ಮಾಡೋಣ. ನಾನು ಕೂಡಾ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯು ದೊಡ್ಡ ಜಿಲ್ಲೆಯಾಗಿದೆ ಹೊಸ ತಾಲೂಕುಗಳನ್ನು ರಚಿಸಿದರೇ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಬಹುವರ್ಷಗಳ ಬೇಡಿಕೆಯಾಗಿರುವ ಕೌಜಲಗಿ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ನಾನು ಕೂಡಾ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇನೆ. ಕೌಜಲಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಾಗರೀಕರಿಗೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೂಡಲಗಿ ಜನತೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿ, ಮೂಡಲಗಿಯನ್ನು ಹೊಸ ತಾಲೂಕುನ್ನು ಮಾಡಿಕೊಂಡು ಬಂದಿದ್ದಾಗಿ ಹೇಳಿದ ಅವರು, ಕೌಜಲಗಿಯನ್ನು ಸಹ ತಾಲೂಕುವನ್ನಾಗಿ ಮಾಡಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ಕೌಜಲಗಿ ಗ್ರಾಮಸ್ಥರ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕಾಮಗಾರಿ ಸಂಪೂರ್ಣ ಮುಗಿದಿದ್ದು. ಫೆಬ್ರುವರಿ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖಂಡರಾದ ಎಮ್.ಆರ್.ಭೋವಿ, ರಾಜೇಂದ್ರ ಸಣ್ಣಕ್ಕಿ, ಬಸನಗೌಡ ಪಾಟೀಲ, ಗೋವಿಂದ ಕೊಪ್ಪದ, ರಾಮಣ್ಣ ಮಹಾರಡ್ಡಿ, ಪರಮೇಶ್ವರ ಹೊಸಮನಿ, ಶಿವಾನಂದ ಲೋಕನ್ನವರ ಅವರು ಮಾತನಾಡಿ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡರು. ಕೌಜಲಗಿ ತಾಲೂಕು ರಚನೆಯಾದರೇ ಸುತ್ತಮುತ್ತಲಿನ ನಾಗರೀಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ. ಈ ಹಿಂದಿನ ಎಲ್ಲ ಆಯೋಗಗಳು ಕೌಜಲಗಿ ತಾಲೂಕು ರಚನೆಗೆ ಸರ್ಕಾರಗಳಿಗೆ ಶಿಫಾರಸ್ಸು ಮಾಡಿವೆ. ಸುಮಾರು ೩ ದಶಕಗಳಿಂದ ಸತತವಾಗಿ ನಾವುಗಳು ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ನಾಯಿಕ, ವಿಠ್ಠಲ ಸವದತ್ತಿ, ಸುಭಾಸ ವಂಟಗೋಡಿ, ಕರೆಪ್ಪ ಬಿಸಗುಪ್ಪಿ, ರವಿ ಪರುಶೆಟ್ಟಿ, ಈರಣ್ಣ ಜಾಲಿಬೇರಿ, ಬಾಳಪ್ಪ ಗೌಡರ, ಸುಭಾಶ ಕೌಜಲಗಿ, ಮಹೇಶ ಪಟ್ಟಣಶೆಟ್ಟಿ, ಮಹಾಂತೇಶ ಶಿವನಮಾರಿ, ಮುದಕಪ್ಪ ಗೋಡಿ, ಅಡಿವೆಪ್ಪ ಅಳಗೋಡಿ, ಪ್ರಕಾಶ ಹೆಗಡೆ, ನೀಲಪ್ಪ ಕಿವಟಿ, ಹಾಸಿಮ್‌ಸಾಬ ನಗಾರ್ಚಿ, ಪ್ರಕಾಶ ಕೋಟಿನತೋಟ, ಪ್ರೋ.ರಾಜು ಕಂಬಾರ, ಲಕ್ಷö್ಮಣ ಸಂಕ್ರಿ, ಸಿದ್ದಪ್ಪ ಡೋಣಿ, ಅಶೋಕ ಉದ್ದಪ್ಪನ್ನವರ, ಶಾಂತಪ್ಪ ಹಿರೇಮೇತ್ರಿ, ಜಿ.ಎಸ್.ಲೋಕನ್ನವರ, ಅಲ್ಲಾಬಕ್ಷ ಹುನ್ನೂರ, ಅಶೋಕ ಶಿವಾಪೂರ ಸೇರಿದಂತೆ ಕೌಜಲಗಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

*ಈ ವಿಚಾರದಲ್ಲಿ ಕಾಂಪ್ರಮೈಸ್ ಆಗಲ್ಲ ಎಂದ ಮಾಜಿ ಸಿಎಂ ಯಡಿಯೂರಪ್ಪ*

https://pragati.taskdun.com/b-s-yedyurappabelagavividhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button