Kannada NewsKarnataka NewsLatest

*ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಹೃದಯಾಘಾತ: ಮಲಗಿದ್ದಲ್ಲಿಯೇ ಸಾವನ್ನಪ್ಪಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮತ್ತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ದುರಂತ ಸಂಭವಿಸಿದೆ. 50 ವರ್ಷದ ಕೃಷ್ಣ ಹೃದಯಾಘಾತಕ್ಕೆ ಬಲಿಯಾದವರು. ಹಾಸನದ ಜಕ್ಕೇನಹಳ್ಳಿ ಗ್ರಾಮದವರು.

Home add -Advt

ಕೃಷ್ಣ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದರು. ಅವರ ಅಳಿಯ ದಿನೇಶ್ ಎಂಬುವವರು ಹಿಂದೇಯೇ ಬರುತ್ತಿದ್ದರು. ಆದರೆ ಅಳಿಯನಿಗಿಂತ ಮುಂದೆ ಸಾಗಿದ್ದ ಕೃಷ್ಣ ಅವರು ಚೀಕನಹಳ್ಳಿ ಗ್ರಾಮದ ಆಟೋ ಸ್ಟ್ಯಾಂಡ್ ನಲ್ಲಿ ಅಳಿಯಬರುವವರೆಗೂ ವಿಶ್ರಾಂತಿ ಪಡೆಯೋಣವೆಂದು ಆಟೋ ಸ್ಟ್ಯಾಂಡ್ ನಲ್ಲಿಯೇ ಮಲಗಿದ್ದರು.

ಅಳಿಯ ಆಟೋ ಸ್ಟ್ಯಾಂಡ್ ಬಳಿ ಬಂದು ಮಾವನನ್ನು ಎಬ್ಬಿಸಿದರೆ ಮಾವ ಎಚ್ಚರಗೊಂಡಿಲ್ಲ. ಮೇಲೇಳಲೂ ಇಲ್ಲ. ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ತಕ್ಷಣ ಬೇಲೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Back to top button