Latest

ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ; ಡಿಎನ್ಎ ಟೆಸ್ಟ್ ಗೆ ಮುಂದಾದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿರುವ ಪೊಲಿಸರು ಆರೋಪಿಗಳ ಡಿಎನ್ ಎ ಟೆಸ್ಟ್ ಗೆ ಮುಂದಾಗಿದ್ದಾರೆ.

ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಆರೋಪಿಗಳ ಮೊಬೈಲ್ ನಲ್ಲಿ ಅರೆನಗ್ನ ಪಾರ್ಟಿ, ಮೋಜು ಮಸ್ತಿ ಸೇರಿದಂತೆ ನೂರಾರು ವಿಡಿಯೋಗಳು ಪತ್ತೆಯಾಗಿವೆ. ಆರೋಪಿಗಳ ಹಾಗೂ ಯುವತಿಯ ಡಿಎನ್ ಎ ಟೆಸ್ಟ್ ಗೆ ಮುಂದಾಗಿದ್ದು, ಮಡಿವಾಳದಲ್ಲಿರುವ ಎಫ್ಎಸ್ಎಲ್ ನಲ್ಲಿ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.

Home add -Advt

ಪ್ರಕರಣ ಸಂಬಂಧ ತನಿಖೆ ಬೆನ್ನುಹತ್ತಿದ ಪೊಲೀಸರಿಗೆ ಬೃಹತ್ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಪತ್ತೆಯಾಗುದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿರುವುದಾಗಿ ತಿಳಿಸಿದ್ದಾರೆ. ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ಗೇರ್ ಪ್ರಕರಣ ಸಂಬಂಧ ಎರಡು ದಿನಗಳಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಅತ್ಯಾಚಾರ ಆರೋಪ: ಬೆಂಗಳೂರಲ್ಲಿ ಮಾಜಿ ಸಚಿವ ಆರೆಸ್ಟ್

Related Articles

Back to top button