Latest

ವಿದ್ಯಾರ್ಥಿನಿಯರ ಫೋಟೊವನ್ನು ಅಶ್ಲೀಲ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದ ಪಾಪಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ ಉಪನ್ಯಾಸಕ ಸಿಬ್ಬಂದಿಯ ಫೋಟೋಗಳನ್ನು ಕದ್ದು ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಇಬ್ಬರು ಟೆಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಟೆಕ್ಕಿಗಳನ್ನು ಅಜಯ್ ತನಿಕಾಂಚಲಂ, ವಿಶ್ವಕ್ ಸೇನ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ಏಳು ಪ್ರಕರಣಗಳು ದಾಖಲಾಗಿತ್ತು. ಸರಿ ಸುಮಾರು 30ಕ್ಕೂ ಹೆಚ್ಚು ಯುವತಿಯರ ಫೋಟೋಗಳನ್ನು ಆರೋಪಿಗಳು ಅಶ್ಲೀಲ ವೆಬ್‍ಸೈಟ್‍ಗಳಿಗೆ ಅಪ್ಲೋಡ್ ಮಾಡಿದ್ದರು.

Home add -Advt

ಕಾಲೇಜು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಕದ್ದು ಅವರ ಫೋಓದ ಮುಖಕ್ಕೆ ಅಶ್ಲೀಲ ದೇಹದ ಫೋಟೊಗಳನ್ನು ಎಡಿಟ್ ಮಾಡುತ್ತಿದ್ದರು. ನಕಲಿ ಖಾತೆ ಸೃಷ್ಟಿಸಿ ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಂ ನಲ್ಲಿ ವಿದ್ಯಾರ್ಥಿನಿಯರಿಗೆ ರಿಕ್ವೆಸ್ಟ್ ಕಳಿಸಿ ಬಳಿಕ ಫೋಟೋಗನ್ನು ಆರೋಪಿಗಳು ಶೇರ್ ಮಾಡಿಕೊಂಡಿದ್ದರು. ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಫೋಟೋಗಳು ಪತ್ತೆಯಾಗುತ್ತಿದಂತೆ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರು.

 

Related Articles

Back to top button