ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 54 ಪುಂಡರನ್ನು ಬಂಧಿಸಿದ್ದಾರೆ.
ಘಟನೆಯ ಕುರಿತು ಕಠೋರ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಜನರು ಸರಕಾರದ ವಿರುದ್ಧ ಚಟುವಟಿಕೆ ಮಾಡದೆ ಸಹಕರಿಸದಿದ್ದರೆ ಅಂತವರ ಪುಂಡಾಟಿಕೆ ಧಮನಗೊಳಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಪೊಲೀಸ್ ಆ್ಯಕ್ಷನ್ ಅಂದರೆ ಏನೆಂದು ನಿರ್ದಾಕ್ಷಿಣ್ಯವಾಗಿ ತೋರಿಸುತ್ತೇವೆ ಎಂದೂ ಅವರು ಎಚ್ಚರಿಸಿದರು.
ಪಾದರಯನಪುರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಈ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಆದಗ್ಯೂ ಜನರು ವಾಹನಗಳಲ್ಲಿ ಬೇಕಾ ಬಿಟ್ಟಿ ಓಡಾಡುತ್ತಲೇ ಇದ್ದರು. ನಿನ್ನೆ ರಾತ್ರಿ ಈ ಪ್ರದೇಶದಲ್ಲಿ ಗುಂಪು ಗುಂಪಾಗಿ ಬಂದ ಕಿಡಿಗೇಡಿಗಳು ಕರ್ತವ್ಯ ನಿರತ ಪೊಲೀಸರ ಮೇಲೆ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಪ್ರಕರಣ ಸಂಬಂಧ 50 ಜನರನ್ನು ಬಂಧಿಸಲಾಗಿದೆ.
ಈ ನಡುವೆ ಪಾದರಯನಪುರ ಸ್ಥಳೀಯರು ಹೇಳುವ ಪ್ರಕಾರ ನಿನ್ನೆ ಗಲಾಟೆ, ದಾಂಧಲೆ ನಡೆಸಿದ ಕಿಡಿಗೇಡಿಗಳು ಪಾದರಾಯನಪುರದವರಲ್ಲ. ಹೊರಗಡೆಯಿಂದ ಬಂದು ಇಲ್ಲಿ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು, ಈ ವೇಳೆ ಗಲಾಟೆ ನಡೆದ ಸಂದರ್ಭದಲ್ಲಿ ಪೊಲೀಸರು, ಹಿರಿಯ ಅಧಿಕಾರಿಗಳು ಎಲ್ಲಿದ್ದಿರಿ ಎಂದು ತಾರಾಟೆಗೆ ತೆಗೆದುಕೊಂಡರು. ಇಂತಹ ಘಟನೆ ಮತ್ತೆ ಮರುಕಳಿಸಬಾಅರದು. ಇಡೀ ಪಾದರಾಯನಪುರದಲ್ಲಿ ಕಟ್ಟುನಿಟ್ಟಾದ, ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯರೊಬ್ಬರೂ ಮನೆಯಿಂದ ಹೊರಬರದಂತೆ ನೋಡಿಕೊಳ್ಳಿ ಎಂದು ಖಡಕ್ ಆಗಿ ಸೂಚಿಸಿದರು.
Big News – ಬೆಂಗಳೂರಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಮೇಲೆ ಪುಂಡಾಟಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ