
ಪ್ರಗತಿ ವಾಹಿನಿ ಸುದ್ದಿ, ನವದೆಹಲಿ:
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದ ಅವಧಿಯಿಂದ ಈವರೆಗೆ ಜಾಹೀರಾತಿಗೆ ಖರ್ಚು ಮಾಡಿದ ಹಣವೆಷ್ಟು ಗೊತ್ತೆ ? ಈ ಮೊತ್ತ ಕೇಳಿದರೆ ಜನಸಾಮಾನ್ಯರು ದಂಗುಬಡಿಯುವುದು ನಿಶ್ಚಿತ.
ಬರೋಬ್ಬರಿ 3,260.29 ಕೋಟಿ ಹಣವನ್ನು ಮಾಧ್ಯಮಗಳ ಜಾಹೀರಾತಿಗೆ ಕೇಂದ್ರ ಸರಕಾರ ಖರ್ಚು ಮಾಡಿದೆ.
ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಯಾವಾಗ ಎಷ್ಟು ?
2014-15ರಲ್ಲಿ ಮುದ್ರಣ ಮಾಧ್ಯಮಕ್ಕೆ 424.84 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 473.67 ಕೋಟಿ
2015-16ರಲ್ಲಿ ಮುದ್ರಣ ಮಾಧ್ಯಮಕ್ಕೆ 508.22 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 531.60 ಕೋಟಿ
2016-17ರಲ್ಲಿ ಮುದ್ರಣ ಮಾಧ್ಯಮಕ್ಕೆ 468.53 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 609.15 ಕೋಟಿ
2017-18ರಲ್ಲಿ ಮುದ್ರಣ ಮಾಧ್ಯಮಕ್ಕೆ 636.09 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 468.92 ಕೋಟಿ
2018-19ರಲ್ಲಿ ಮುದ್ರಣ ಮಾಧ್ಯಮಕ್ಕೆ 429.55 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 514.28 ಕೋಟಿ
2019-20ರಲ್ಲಿ ಮುದ್ರಣ ಮಾಧ್ಯಮಕ್ಕೆ 295.05 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 317.11 ಕೋಟಿ
2020-21ರಲ್ಲಿ ಮುದ್ರಣ ಮಾಧ್ಯಮಕ್ಕೆ 197.49 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 167.98 ಕೋಟಿ
2021-22ರಲ್ಲಿ ಮುದ್ರಣ ಮಾಧ್ಯಮಕ್ಕೆ 179.04 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 101.24 ಕೋಟಿ
2022-23ರಲ್ಲಿ (ಈವರೆಗೆ) ಮುದ್ರಣ ಮಾಧ್ಯಮಕ್ಕೆ 91.96 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 76.84 ಕೋಟಿ ರೂ.ಗಳ ಜಾಹೀರಾತು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಹಿಂದು- ಮುಸ್ಲಿಂ ಪ್ರೇಮ ಪ್ರಕರಣ: 18 ವಿದ್ಯಾರ್ಥಿಗಳ ಅಮಾನತ್ತು*
https://pragati.taskdun.com/18-students-suspended-in-vitla-pu-college/
ಕೇಂದ್ರದ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆದ ಮಹಿಳೆಯರ ಸಂಖ್ಯೆ 38 ಲಕ್ಷಕ್ಕೂ ಹೆಚ್ಚು!
https://pragati.taskdun.com/more-than-38-lak-women-trained-under-centre-skill-devolopment-programmes/