Kannada NewsKarnataka NewsLatestPolitics

*ಸಿಎಂ ಬಹಳ ವೀಕ್ ಆಗಿದ್ದಾರೆ; ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈವಾಗಿನ ಸಿದ್ದರಾಮಯ್ಯ ಬೇರೆ ಎಂದ ಮಾಜಿ ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಸಿದ್ದರಾಮಯ ಬಹಳಷ್ಟು ಬದಲಾಗಿದ್ದಾರೆ. ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈವಾಗಿನ ಸಿದ್ದರಾಮಯ್ಯ ಬೇರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರುವುದು ಬಹಳ ವಿರಳ. ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯನವರ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳುತ್ತಿಲ್ಲ ಎಂದು ಹೇಳಿದ್ದಾರೆ.

Home add -Advt

ಇದೇ ವೇಳೆ ಈಗ ಸಿದ್ದರಾಮಯ್ಯ ವರಿಷ್ಠರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಸರ್ಕಾರದಲ್ಲಿ ಹೈಕಮಾಂಡ್ ನಿಂದಲೂ ಹಸ್ತಕ್ಷೇಪ ನಡೆಯುತ್ತಿದೆ. ರಾಜ್ಯ ಸರ್ಕಾರದ ರಿಮೋಟ್ ಕಾಂಗ್ರೆಸ್ ಹೈಕಮಂಡ್ ಕೈಯಲ್ಲಿದೆ. ನಿನ್ನೆ ನದೆದ ಸಭೆಯಲ್ಲಿಯೂ ಕಪ್ಪ ಕಾಣಿಕ್ ಬಗ್ಗೆ ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಪ್ಪ ಕಾಣಿಕೆ ಹೈಕಮಾಂದ್ ಗೆ ಕೊಡೋದು ಹೊಸದೇನಲ್ಲ ನಿನ್ನೆಯ ಸಭೆಯಲ್ಲಿಯೂ ಅದು ಮುಂದುವರೆದಿದೆ ಎಂದು ಆರೋಪಿಸಿದ್ದಾರೆ.


Related Articles

Back to top button