Belagavi NewsBelgaum News

*ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲೆಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ*

ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಬೆಂಬಲಿಗರು ಮಾರೀಹಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಶ್ರೀ ಗುಡದಮ್ಮ ದೇವಸ್ಥಾನದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಬೇಗನೇ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾರೀಹಾಳ ಗ್ರಾಮದ ಬಸವರಾಜ ಮ್ಯಾಗೋಟಿ, ಸಂಜಯ ಚಾಟೆ, ಪ್ರಕಾಶ ಯಲ್ಲಪ್ಪನವರ, ಈರಣ್ಣ ಪಾಟೀಲ, ಶಂಕರ ಸೊಗಲಿ, ರಮೇಶ ಅಕ್ಕತಂಗೇರಹಾಳ, ಬಾಳು ಕರವಿನಕೊಪ್ಪ, ಗುಡದಪ್ಪ ಗೊರವ, ಯಲಗುಂಡ ಸೀತಿಮನಿ, ಶಿವಗುಂಡ, ಸಮೀರ ಮುಲ್ಲಾ, ದಿಲಾವರ, ವಿನೋದ ಚವ್ಹಾಣ, ಬಸು ಚನ್ನಣ್ಣವರ, ಗಿರಿಜಾ ಪಾಟೀಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Home add -Advt

Related Articles

Back to top button