Belagavi NewsBelgaum NewsKannada NewsKarnataka News

*ನಿಸ್ವಾರ್ಥ ಸೇವೆಯಿಂದ ಸ್ಮರಣೀಯವಾಗಬೇಕು: ಡಾ. ಸಿದ್ದು ಹುಲ್ಲೋಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಾವುದೇ ಕ್ಷೇತ್ರದಲ್ಲಿ ನಾವು ಸಲ್ಲಿಸುವ ಸೇವೆಗಳು ನಿಸ್ವಾರ್ಥದಿಂದ ಕೂಡಿದಾಗ ಸ್ಮರಣೀಯವಾಗಲು ಸಾಧ್ಯವೆಂದು ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಹೇಳಿದರು.

ಗುರುವಾರ ನಗರದ ಗೋವಾ ವೇಸನಲ್ಲಿರುವ ಪಾಲಿಕೆಯ (ಕಂದಾಯ) ದಕ್ಷಿಣ ವಿಭಾಗದಲ್ಲಿ ಕಂದಾಯ ಅಧಿಕಾರಿಯಾಗಿ ಸೇವಿ ಸಲ್ಲಿಸಿ ಮಾತೃ ಇಲಾಖೆಗೆ ಮರಳಿ ವರ್ಗಾವಣೆಯಾಗಿರುವ ಧರ್ಮನಾಥ ಕೋರಿ ಅವರ ಬೀಳ್ಕೊಡುಗೆ ಹಾಗೂ ದಕ್ಷಿಣ ವಲಯ ಆಯುಕ್ತರಾಗಿ ನೂತನವಾಗಿ ನಿಯುಕ್ತಿ ಗೊಂಡಿರುವ ಜಗದೀಶ ಎಸ್ ಅವರ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದ ಬದ್ಧತೆಯ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಸಂವಹಣ ಹಾಗೂ ಸಿಬ್ಬಂದಿಯೊಂದಿಗೆ ಸಹಕಾರದಿಂದ  ಕಾರ್ಯನಿರ್ವಹಿಸಿ ಸೇವಾ ಅವಧಿಯನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಧರ್ಮನಾಥ ಕೋರಿಯವರ ಸೇವೆ ಮಾದರಿಯಾಗಿದೆ ಎಂದು ಹೇಳಿದರು. 

ನಗರಸೇವಕರಾದ ಮಂಗೇಶ ಪವಾರ, ಶ್ರೀಶೈಲ ಕಾಂಬಳೆ, ಗಿರೀಶ ದೋಂಗಡಿ ಇತರರು ಅತಿಥಿಗಳಾಗಿದ್ದರು. 

ಧರ್ಮನಾಥ ಕೋರಿ ಹಾಗೂ ಜಗದೀಶ್ ಎಸ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಸ್ಲಂ ಮಾಜಿಕೋತ್ವಾಲ ಸ್ವಾಗತಿಸಿದರು. ಶ್ರೀಕಾಂತ ಇರಳೆ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button