Belagavi NewsBelgaum NewsKannada NewsKarnataka NewsNational
*ಪಂಜಾಬ್ ನಲ್ಲಿ ಬೆಳಗಾವಿ ಯೋಧ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಜಾಬ್ ರಾಜ್ಯದ ಬಟಿಂದಾ ನಗರದಲ್ಲಿ ಕರ್ತವ್ಯ ನಿಮಿತ್ತ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆಎಚ್ ಗ್ರಾಮದ ಯೋಧ ಜಗದೀಶ ಮನೋಹರ ಶಿಂಧೆ (40) ಮೃತಪಟ್ಟಿದ್ದಾರೆ.
ಕಳೆದ 24 ವರ್ಷಗಳಿಂದ ಸೇನೆಯಲ್ಲಿದ್ದ ಜಗದೀಶ ನಾಲ್ಕು ತಿಂಗಳಿಗೆ ನಿವೃತ್ತರಾಗುವವರಿದ್ದರು. ಬಟಿಂದಾದ ಆರ್ಮಿ ಏರ್ ಡಿಫೆನ್ಸ್ ಸೇನಾ ಕೇಂದ್ರದ ಸೇವೆಯಲ್ಲಿದ್ದರು.
ಕುಟುಂಬ ಸಮೇತ ಯೋಧನ ಪಾರ್ಥಿವ ಶರೀರ ದೆಹಲಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ಆಗಮಿಸಲಿದ್ದು, ಅಲ್ಲಿಂದ ಸ್ವಗ್ರಾಮಕ್ಕೆ ಕರೆದೊಯ್ಯಲಿದ್ದಾರೆ.
ಪತ್ನಿ, ಇಬ್ಬರು ಪುತ್ರರು ಪಾರ್ಥಿವ ಶರೀರದ ಜತೆಗೆ ಆಗಮಿಸುತ್ತಿದ್ದಾರೆ. ಮೃತರಿಗೆ ತಂದೆ-ತಾಯಿ ಇದ್ದಾರೆ. ಮೃತ ಜಗದೀಶ ಸೋದರ ಸಹ ಸೇನೆಯಲ್ಲಿದ್ದಾರೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.


