Latest

ಯುವತಿ ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ಮಾಜಿ ಪ್ರೇಮಿ

ಪ್ರಗತಿವಾಹಿನಿ ಸುದ್ದಿ, ವಿಜಯನಗರ: ಯುವಕನೊಬ್ಬ ಯುವತಿಯ ರುಂಡ ಕತ್ತರಿಸಿ ಅದನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತಂದು  ಪೊಲೀಸರೆದುರು ಶರಣಾಗಿದ್ದಾನೆ. 

ಕೂಡ್ಲಿಗಿ ತಾಲೂಕಿನ ಕನ್ನಿಬೋರಯ್ಯನಹಟ್ಟಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.ನಿರ್ಮಲಾ(23)  ಕೊಲೆಯಾದವಳು. ಭೋಜರಾಜ(27) ಕೊಲೆಗೈದ ಆರೋಪಿ. 

ಭೋಜರಾಜ ಮತ್ತು ನಿರ್ಮಲಾ ಪರಸ್ಪರ ಪ್ರೀತಿಸಿದ್ದರು. ಆದರೆ ನಿರ್ಮಲಾ ಕುಟುಂಬದವರು ಇದನ್ನು ವಿರೋಧಿಸಿದ್ದರು. ಹೀಗಾಗಿ ಭೋಜರಾಜ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ.

ಆದರೂ ನಿರ್ಮಲಾ ಮೇಲೆ ಒಳಗೊಳಗೇ ಹೊಂದಿದ್ದ ದ್ವೇಷವನ್ನು ಆಕೆಯ ರುಂಡ ಕತ್ತರಿಸುವ ಮೂಲಕ ತೀರಿಸಿಕೊಂಡಿದ್ದಾನೆ. ನಂತರ ಖಾನಾಹೊಸಳ್ಳಿ ಪೊಲೀಸ್ ಠಾಣೆಗೆ ರುಂಡ ಸಹಿತ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

Home add -Advt

ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.

ಆರತಕ್ಷತೆ ವೇಳೆ ಕುಸಿದುಬಿದ್ದು ವರನ ಸಾವು

 

Related Articles

Back to top button