Belagavi NewsBelgaum NewsCrimeKarnataka News

*BREAKING: ಬೆಳಗಾವಿಯಲ್ಲಿ ಘೋರ ಕೃತ್ಯ: ಪಾರ್ಟಿಗೆ ಕರೆದು ಯುವಕನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪಾರ್ಟಿಗೆ ಕರೆದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ನಡೆದಿದೆ.

8-10 ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಮುತ್ತುಸ್ವಾಮಿ (30) ಕೊಲೆಯಾದ ದುರ್ದೈವಿ. ಮುತ್ತುಸ್ವಮಿ ಗೋಕಾಕ್ ತಾಲೂಕಿನ ಮಾಣಿಕವಾಡಿ ನಿವಾಸಿ.

ಕೊಲೆ ಕೇಸ್ ನಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿ ಎರಡು ದಿನಗಳ ಹಿಮ್ದಷ್ಟೇ ಮುತ್ತುಸ್ವಾಮಿ ಬಂದಿದ್ದ. ಸ್ನೇಹಿತರ ಜೊತೆ ಹಿಡಕಲ್ ಡ್ಯಾಮ್ ಬಳಿ ಪಾರ್ಟಿಗೆ ಹೋಗಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Home add -Advt

Related Articles

Back to top button