Belagavi NewsBelgaum News

*ಬಿಮ್ಸ್ ಆಸ್ಪತ್ರೆ ನಿರ್ದೇಶಕರ ಅಧ್ವಾನ: ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಹಾಸ್ಟೇಲ್ ಗೆ ಶಿಫ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾಸ್ಪತ್ರೆ ನಿರ್ದೇಶಕರ ಅಧ್ವಾನಕ್ಕೆ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಬಾಲಕರ ಹಾಸ್ಟೇಲ್ ಗೆ ಶಿಫ್ಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಬಾಲಕರ ಹಾಸ್ಟೇಲ್ ನಲ್ಲಿ ಸ್ಕ್ಯಾನಿಂಗ್ ಮಷಿನ್ ಕಂಡು ಎಂಎಲ್ ಸಿ ನಾಗರಾಜ ಯಾದವ ಶಾಕ್ ಆಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರಬೇಕಿದ್ದ ಸ್ಕ್ಯಾನಿಂಗ್ ಮಷಿನ್ ಹಾಸ್ಟೇಲ್ ಗೆ ಬಂದಿದ್ದು, ಇದರಿಂದ ರೋಗಿಗಳು ಸ್ಕ್ಯಾನಿಂಗ್ ಗಾಗಿ ಹಾಸ್ಟೇಲ್ ಗೆ ಬರುವಂತಾಗಿದೆ. ಬಿಮ್ಸ್ ನಿರ್ದೇಶಕರ ಬೇಜವಾಬ್ದರಿಗೆ ಎಂಎಲ್ ಸಿ ನಾಗರಾಜ ಕಿಡಿಕಾರಿದ್ದಾರೆ.

ಕೆಡಿಪಿ ಸಭೆಯಲ್ಲಿಯೂ ಸ್ಕ್ಯಾನಿಂಗ್ ಮಷಿನ್ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಹಾಸ್ಟೇಲ್ ನಲ್ಲಿ ಸ್ಕ್ಯಾನಿಂಗ್ ಮಾಡುತ್ತಿರುವ ಕಾರಣ ವಿದ್ಯಾರ್ಥಿಗಳಲ್ಲೂ ಆತಂಕ ಎದುರಾಗಿದೆ. ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ವಿರುದ್ಧ ಪರಿಷತ್ ಸದಸ್ಯ ನಾಗರಾಜ್ ಗರಂ ಆಗಿದ್ದು, ಜಾಗವಿಲ್ಲ ಎಂದು ಕಾರಣಗಳನ್ನು ಹೇಳುವುದನ್ನು ಮೊದಲು ಬಿಡಿ. ಕಾನೂನು ರೀತಿ ಕೆಲಸ ಮಾಡಿಕೊಂಡು ಹೋಗುವುದಾದರೆ ಹೋಗಿ ಇಲ್ಲವಾದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button