Vikalachetanara Day
Cancer Hospital 2
Bottom Add. 3

*ಚಿಕಲವಾಳ ಗ್ರಾಮದಲ್ಲಿ 62 ಉಚಿತ ಗ್ಯಾಸ್ ವಿತರಣೆ ಮಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಹೊಗೆಮುಕ್ತ ಗ್ರಾಮವನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ದೇಶದ ಸುಮಾರು 8 ಕೋಟಿ ಜನರಿಗೆ ಉಜ್ವಲಾ ಗ್ಯಾಸ್ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲೆಂಡರಗಳನ್ನು ವಿತರಿಸಲಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.


ಅವರು ಸೋಮವಾರ ತಾಲೂಕಿನ ಚಿಕಲವಾಳ ಗ್ರಾಮದಲ್ಲಿ 62 ಉಚಿತ ಗ್ಯಾಸ್ ವಿತರಿಸಿ ಮಾತನಾಡಿ, ಈಗಾಗಲೇ ಚಿಕಲವಾಳ ಒಂದೇ ಗ್ರಾಮದಲ್ಲಿ 650 ಉಚಿತ ಗ್ರಾಸ್ ವಿತರಿಸಲಾಗಿದ್ದು ಇನ್ನು ಉಳಿದಿದ್ದರು ಅವರಿಗೂ ಗ್ಯಾಸ್ ವಿತರಿಸಲಾಗುವುದು ಎಂದರು.


ಕೇಂದ್ರ ಸರ್ಕಾರ ಮಹಿಳೆಯರಿಗೆ ಮನೆಯಲ್ಲಿಯೇ ಕುಳಿತು ಸಣ್ಣ ಪುಟ್ಟ ಉದ್ಯೋಗ ಕೈಗೊಳ್ಳಲು 1 ಲಕ್ಷ ರೂಗಳಿಂದ 1 ಕೋಟಿ ರೂಗಳವರೆಗೆ ಸಾಲ ನೀಡಿ ಪ್ರತಿಶತ 35 ರಷ್ಟು ಸಬ್ಸಿಡಿ ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಣ್ಣ ಪುಟ್ಟ ಉದ್ಯೋಗ ಕೈಕೊಂಡಲ್ಲಿ ಅವುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಮಾಡಿಕೊಡಲಾಗುವುದು ಉದ್ಯೋಗ ಕೈಗೊಳ್ಳ ಮುಂದೆ ಬಂದರೆ ಅವರಿಗೆ ನಮ್ಮ ಕಚೇರಿಯಿಂದ ಸಾಲ ಸೌಲಭ್ಯದ ಜೊತೆಗೆ ಪ್ರಾಜೇಕ್ಟ್ ರಿಪೋರ್ಟ ತಯಾರಿಸಿಕೊಡಲಾವುದು ಎಂದು ತಿಳಿಸಿದರು.


ಕೇಂದ್ರ ಸರ್ಕಾರ ಐಯುಸ್ಮಾನ್ ಭಾರತ ಸೇರಿದಂತೆ ಹಲವು ಆರೋಗ್ಯ ವಿಮೆ ಯೋಜನೆಗಳನ್ನು ಬಡ ಜನರಿಗಾಗಿ ಜಾರಿಗೆ ತಂದಿದ್ದು ಅವುಗಳ ಸದುಪಯೋಗಪಡೆದುಕೊಳ್ಳಬೇಕೆಂದರು.


ಗ್ರಾಮ ಪಂಚಾಯತಿ ಅಧ್ಯಕ್ಷ ಧನಾಜಿ ಪಾಟೀಲ,ಉಪಾಧ್ಯಕ್ಷ ಸವುಬಾಯಿ ಗಾವಡೆ,ಹಾಲಶುಗರ್ ಸಂಚಾಲಕ ವಿನಾಯಕ ಪಾಟೀಲ,ಗ್ರಾಮ ಪಂಚಾಯತಿ ಸದಸ್ಯ ಸಚೀನ ಮದನೆ,ನಾಮದೇವ ಕುರಾಡೆ,ಶಿವರಾಜು ಕುಂಬಾರ,ಸುರೇಶ ನಾಯಕ್,ಪ್ರಮೋದ ದೇಸಾಯಿ, ನಂದಕುಮಾರ ಪವಾರ,ಪುಷ್ಕರ ತರಾಳೆ,ಗಜೇಂದ್ರ ತರಾಳೆ ಉಪಸ್ಥಿತರಿದ್ದರು.

ಚಿಕ್ಕೋಡಿ ತಾಲೂಕಿನ ಚಿಕಲವಾಳ ಗ್ರಾಮದಲ್ಲಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ಉಜ್ವಲಾ ಗ್ರಾಸ್ ಯೋಜನೆಯಡಿ ಉಚಿತವಾಗಿ ಗ್ರಾಸ್‍ಗಳನ್ನು ವಿತರಿಸಿದರು.


ಧನಾಜಿ ಪಾಟೀಲ, ಸವುಬಾಯಿ ಗಾವಡೆ, ವಿನಾಯಕ ಪಾಟೀಲ, ಪುಷ್ಕರ ತರಾಳೆ,ಗಜೇಂದ್ರ ತರಾಳೆ ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page