Kannada NewsLatest

*ಸ್ಮಶಾನಭೂಮಿ : ಸಾರ್ವಜನಿಕ ಅಹವಾಲು ಸಲ್ಲಿಕೆಗೆ ಅವಕಾಶ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಭೂಮಿ ಕಲ್ಪಿಸುವ ಸಂಬಂಧ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಲಯವು ರಾಜ್ಯದ ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಅಗತ್ಯತೆ ಬಗ್ಗೆ ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಶಾನ ಭೂಮಿಯ ಆವಶ್ಯಕತೆ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ನಿರ್ದೇಶನ ನೀಡಿರುತ್ತದೆ.

ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಸಾರ್ವಜನಿಕ ಸ್ಮಶಾನಭೂಮಿಗಾಗಿ‌ ಜಾಗೆ ನೀಡಲಾಗಿರುತ್ತದೆ.

ಆದಾಗ್ಯೂ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿಯು ಇಲ್ಲ ಎಂಬ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿ ಅಥವಾ ಕಂದಾಯ ನಿರೀಕ್ಷಕ ಅಥವಾ ತಹಶೀಲ್ದಾರ ಕಾರ್ಯಾಲಯದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

Home add -Advt

ಆಕ್ಷೇಪಣೆ ಸಲ್ಲಿಸುವವರು, ಸ್ಮಶಾನಭೂಮಿ ಇಲ್ಲದ ಗ್ರಾಮದ ಹೆಸರಿನ ಜತೆಗೆ 1.ತಮ್ಮ ಹೆಸರು 2.ತಂದೆಯ ಹೆಸರು 3.ಆಧಾರ್ ಕಾರ್ಡ್ ಸಂಖ್ಯೆ 4.ಗ್ರಾಮ/ಪಟ್ಟಣ/ನಗರ/ತಾಲ್ಲೂಕು/ಜಿಲ್ಲೆಯ ಮಾಹಿತಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button