Kannada NewsLatest

ಬೆಳಗಾವಿ ನಗರದ ಪ್ರಮುಖ ಸ್ಥಳಗಳಲ್ಲಿ 4 ದಿನ ವಿದ್ಯುತ್ ವ್ಯತ್ಯಯ; ಗ್ರಾಮೀಣದಲ್ಲೂ ಕರೆಂಟ್ ಇರಲ್ಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಜಿ.ಆಯ್.ಎಸ್ ಶ್ರೀನಗರದ ೩೩ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣೆ ಕಾರ್ಯವನ್ನು ಏಜೆನ್ಸಿ ಎಬಿಬಿ ಮತ್ತು ಕ್ಲಾಸಿಕ್ ಕಂಡಕ್ರ‍್ಸ ಪ್ರೈವೆಟ್ ಲಿಮಿಟೆಡ್ ಬೆಂಗಳೂರವರು ಕೈಗೊಳ್ಳುತ್ತಿರುವುದರಿಂದ ಜೂನ್ 1ರಿಂದ 4ರವರೆಗೆ 33ಕೆವ್ಹಿ ಜಿ.ಆಯ್.ಎಸ್.ಶ್ರಿನಗರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ಕೆಲ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ 10ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ಆಗಲಿದೆ.

ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಹಾಂತೇಶ ನಗರ, ಸೆಕ್ಟರ್ ನಂ 8, 9, 10, 11 ಮತ್ತು 12, ರುಕ್ಮಿಣಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿರೋಡ್ ಸೈಟ್‌ ಏರಿಯಾ, ಕೆಎಮ್‌ಎಫ್‌ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ್ ಬಿ ಆಯ್ ಯಿಂದ ಧರ್ಮನಾಥ ಭವನ, ಅಶೋಕ ನಗರ, ಕಾನ್ಸರ್ ಹಾಸ್ಪಿಟಲ್, ಹಾಗೂ ಇಎಸ್ ಆಯ್ ಹಾಸ್ಪಿಟಲ್, ವೀರಭದ್ರ ನಗರ, ಶಿವಾಜಿ ನಗರ, ಪೋಲೀಸ್ ಹೆಡ್ ಕ್ವಾಟರ್ಸ, ಕೆಎಸ್ ಆರಟಿಸಿ ಕ್ವಾಟರ್ಸ್, ತ್ರಿವೇಣಿ ಹೋಟೆಲ್‌ ಏರಿಯಾ, ಮೆಟಗುಡ್ ಹಾಸ್ಪಿಟಲ್, ಚನ್ನಮ್ಮ ಸರ್ಕಲ್, ಕಾಲೇಜು ರೋಡ್ ಕಾಕತಿ ವೇಜ್, ಕ್ಲಬ್‌ರಸ್ತೆ, ಡಿ.ಸಿ ಆಫೀಸ್, ಕೋರ್ಟ್ ಕಂಪೌಂಡ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಅಭಿಯಂತರು(ವಿ) ತಿಳಿಸಿದ್ದಾರೆ.

ಇನ್ನು ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33 ಕೆ.ವ್ಹಿ. ಲೋಂಡಾ ಉಪಕೇಂದ್ರದಿಂದ ಸರಬರಾಜು ಆಗುವ ಕೆಲ ಗ್ರಾಮ, ಪ್ರದೇಶಗಳಲ್ಲಿ ಜೂನ್ 2 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ನಾಗರಗಾಳಿ, ನಾಗರಗಾಳಿ ರೇಲ್ವೆ ಸ್ಟೇಶನ್, ಮುಂಡವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೇಲ್ವೆ ಸ್ಟೇಶನ್, ಗುಂಜಿ, ಮೋಹಿಶೇಟ, ವಾಟ್ರೆ, ಭಾಲ್ಕೆ ಬಿ.ಕೆ, ಭಾಲ್ಕೆ ಕೆ.ಎಚ್, ಶಿಂದೋಳ್ಳಿ, ಹೊನ್ಕಲ್, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ ಹಾಗೂ ಡೋಕೆಗಾಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯ ಮತ್ತು ಪಾಲನಾ ಕಾರ್ಯ ನಿರ್ವಾಹಕ ಎಂಜಿನೀಯರು ತಿಳಿಸಿದ್ದಾರೆ.

ಪಠ್ಯ ಪುಸ್ತಕ ಪುನರ್ ರಚನಾ ಸಮೀತಿಯ ಗೊಂದಲ; ಕವಿತೆ ವಾಪಸ್ ಪಡೆದ ಡಾ. ಸರಜೂ ಕಾಟ್ಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button