Kannada NewsKarnataka NewsLatest

*ವಿದ್ಯಾರ್ಥಿನಿ ಮೇಲೆ ಹರಿದ ಗೂಡ್ಸ್ ವಾಹನ: ಕಾಲು ಕಟ್*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯ ಮೇಲೆ ಗೂಡ್ಸ್ ವಾಹನ ಹರಿದು ಹೋಗುದ್ದು, ಆಕೆಯ ಕಾಲು ಕಟ್ ಆಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 9 ವರ್ಷದ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ನೀರು ಕುಡಿಯಲೆಂದು ವಿದ್ಯಾರ್ಥಿನಿ ಶಾಲೆಯ ಹೊರಗಡೆ ಇರುವ ಹ್ಯಾಂಡ್ ಪಂಪ್ ಬಳಿ ಬಂದಿದ್ದಳು. ಈ ವೇಳೆ ಅಪಘಾತ ಸಂಭವಿಸಿದ್ದು, ಬಾಲಕಿ ಮೇಲೆಯೇ ಗೂಡ್ಸ್ ವಾಹನ ಹರಿದು ಹೋಗಿದೆ.

ವಿದ್ಯಾರ್ಥಿನಿ ಲಕ್ಷ್ಮೀ ಬಲಗಾಲು ಬಾಗಶಃ ಕಟ್ ಆಗಿದ್ದು, ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button