Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಧಾರಾಕಾರ ಮಳೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬರದಿಂದ ತತ್ತರಿಸಿದ್ದ ಕುಂದಾನಗರಿ ಬೆಳಗಾವಿ ಜಿಲ್ಲೆಯ ಜನರ ಮೇಲೆ ವರುಣ ಕೃಪೆ ತೋರಿದ್ದಾನೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೊಂಚ ಮಂದಹಾಸ ಮೂಡಿದೆ.

ಭೀಕರ ಬರದಿಂದಾಗಿ ರೈತರು, ಜನರು ಜಾನುವಾರುಗಳು ಕಂಗೆಟ್ಟು ಹೋಗಿದ್ದರು. ಈಗ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರಲ್ಲಿ ಸಮಾಧಾನ ತಂದಿದೆ.

Home add -Advt

ಜಿಲ್ಲೆಯಾಧ್ಯಂತ ಕಾರ್ಮೋಡವೂ ಆವರಿಸಿದ್ದು, ಕತ್ತಲ ವಾತಾವರಣವಿದೆ. ಧಾರಾಕಾರ ಮಳೆಯಾಗುತ್ತಿದೆ. ಬೆಳಿಗ್ಗೆ ಹತ್ತು ಗಂಟೆಯಾಗುತ್ತಾ ಬಂದರೂ ಇನ್ನೂ ಬೆಳಗೇ ಆದಂತಿಲ್ಲ. ಒಟ್ಟಾರೆ ಮಳೆ ಸುರಿಯುತ್ತಿರುವುದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.


Related Articles

Back to top button