ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೈನ ಇಂಟರ್ನ್ಯಾಷನಲ್ ಟ್ರೆಡ ಆರ್ಗನೈಝೇಶನ ( ಜಿತೋ ) ಸಂಸ್ಥೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮದಡಿ ಸುಮಾರು 400 ಸಸಿಗಳನ್ನು ನೆಡಲಾಯಿತು.
ಇತ್ತಿಚಿಗೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಇರುವ ಮಹಾವೀರ ಗೋಶಾಲೆಯಲ್ಲಿ ಸಂಸ್ಥೆಯ ವತಿಯಿಂದ 400 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರೇಂಜ್ ಫಾರೆಸ್ಟ್ ಆಫಿಸರ್ ಪ್ರಶಾಂತ ಜೈನ್ ಅವರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಸೇವಾ ಭಾವಿ ಸಂಸ್ಥೆಗಳು ಈ ರೀತಿಯಲ್ಲಿ ಬೃಹತ್ ವೃಕ್ಷಾಪರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಸಹಕಾರಿಯಾಗಲಿದೆ. ಅದಲ್ಲದೇ ಮುಂಬರುವ ಯುವ ಪೀಳಿಗೆಗೆ ಒಂದು ಅದ್ಭುತ ಕೊಡುಗೆಯನ್ನು ನಾವು ನೀಡಬಹುದಾಗಿದೆ. ಕೇವಲ ಸಸಿಗಳನ್ನು ನೆಡುವುದು ಅಷ್ಟೇ ಅಲ್ಲ . ಅವುಗಳ ಪಾಲನೆಯೂ ಆಗಬೇಕು. ಇದೀಗ ಜಿತೋ ಸಂಸ್ಥೆಯು ಕೈಗೊಂಡಿರುವ ಅಭಿಯಾನವನ್ನು ಕಂಡು ಸಂತೋಷವಾಗುತ್ತಿದ್ದು, 400 ಸಸಿಗಳನ್ನು ನೆಡುವ ಕಾರ್ಯಕ್ರಮ ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿತೋ ಬೆಳಗಾವಿ ವಿಭಾಗದ ಚೇರಮನ್ ಸುನಿಲ ಕಟಾರಿಯಾ ಅವರು ಮಾತನಾಡಿ, ಜಿತೋ ಸಂಸ್ಥೆಯು ಕೈಗೊಂಡಿರುವ ಈ ಅಭಿಯಾನ ಸುಮಾರು ಒಂದು ವರ್ಷಗಳ ಕಾಲ ನಡೆಯಲಿದೆ. ಮುಂದಿನ ಒಂದು ವರ್ಷದವರೆಗೆ ಈ ಎಲ್ಲ ಸಸಿಗಳ ಬಗ್ಗ ವಿಶೇಷ ನಿಗಾ ವಹಿಸಲಾಗುವುದು. ಇದಕ್ಕಾಗಿ ಇಬ್ಬರು ಸಿಬ್ಬಂದಿಗಳನ್ನು ನೇಮಿಸಿ ಸಸಿಗಳ ಸಂರಕ್ಷಣೆ ಮತ್ತು ಪ್ರತಿನಿತ್ಯ ಅವುಗಳಿಗೆ ನೀರು ಹಾಯಿಸುವುದನ್ನು ಸೇರಿ ಎಲ್ಲ ರೀತಿಯ ಕಾಳಜಿ ವಹಿಸಿಕೊಂಡು 400 ಗಿಡಗಳನ್ನು ಸಮೃದ್ದವಾಗಿ ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವೀರ ಗೋಶಾಲೆಯ ಚೇರಮನ್ ಜಬ್ಬರಚಂದ ಅವರು ಮಾತನಾಡಿ, ಗೋಶಾಲೆಯಲ್ಲಿ ವೃಕ್ಷಾರೋಪನ ಮಾಡಿರುವುದರಿಂದ ಗೋಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಅದಲ್ಲದೇ ಇಲ್ಲಿನ ಪ್ರಾಣಿಗಳಿಗೂ ಆಹ್ಲಾದಕರ ವಾತಾವರಣ ನೀಡಿದಂತಾಗುತ್ತಿದ್ದು, ಇದಕ್ಕಾಗಿ ಶ್ರಮಿಸಿದ ಜೀತೊ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಅರುಣಾ ಶಹಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿತೋ ಸಂಸ್ಥೆಯ ವಿಕ್ರಮ ಜೈನ, ಅಮಿತ ದೋಷಿ, ಧನುಸುಖ ಜೈನ, ಜೀವನ ಪೋರವಾಲ,ಮನೋಜ ಸಂಚೇತಿ, ಮಹೇಂದ್ರ ಪೋರವಾಲ, ಜಯದೀಪ ಲೆಂಗಡೆ, ಸುದರ್ಶನ ಶಿಂತ್ರಿ, ಜಿನದತ್ತ ಚಿಕ್ಕಪರಪ್ಪ,.ಮೊದಲಾದವರು ಉಪಸ್ಥಿತರಿದ್ದರು.ವೃಕ್ಷಾರೋಪನ ಕಾರ್ಯಕ್ರಮ ಸಂಯೋಜಕ ಮಹೇಂದ್ರ ಪರಮಾರ ಅತಿಥಿಗಳನ್ನು ಸ್ವಾಗತಿಸಿದರು. ಜಿತೋ ಸಂಸ್ಥೆಯ ಕಾರ್ಯದರ್ಶಿ ಅಂಕಿತ ಖೋಡಾ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಬೊಮ್ಮಾಯಿ ಜೊತೆ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದ ಪ್ರಧಾನಿ ಮೋದಿ! ; ಹುಬ್ಬಳ್ಳಿಗೆ ಏಮ್ಸ್ ಕೇಳಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ