Kannada NewsLatest

ಅವರೊಂದು ದೊಡ್ಡ ಶಕ್ತಿ; ಜಾರಕಿಹೊಳಿಯನ್ನು ಹಾಡಿ ಹೊಗಳಿದ ಲಕ್ಷ್ಮಿ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸತೀಶ್ ಜಾರಕಿಹೊಳಿ ಒಂದು ಶಕ್ತಿ ಇದ್ದಂತೆ. ಅಂತಹ ಶಕ್ತಿಯನ್ನು ನಾವು ಚುನಾವಣೆಗೆ ನಿಲ್ಲಿಸುತ್ತಿದ್ದೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಅವರನ್ನು ಹಾಡಿ ಹೊಗಳಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿಯವರನ್ನು ಕಣಕ್ಕಿಳಿಸಲಾಗುತ್ತಿದ್ದು, ಈ ಕುರಿತು ಮಾತನಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಅಣ್ಣನವರು ನಮ್ಮ ನಾಯಕರು. ಅವರೆಂದೂ ಜಾತಿ ರಾಜಕಾರಣ ಮಾಡಿಲ್ಲ. ಮಹಾತ್ಮರ ಆದರ್ಶ ಇಟ್ಟುಕೊಂಡು ಮುನ್ನಡೆಯುತ್ತಿರುವವರು. ಉಪಚುನಾವಣೆಯಲ್ಲಿ ಸತೀಶಣ್ಣ ಸ್ಪರ್ಧಿಸುತ್ತಿರುವುದೇ ಕಾಂಗ್ರೆಸ್ ಗೆ ದೊಡ್ಡ ಶಕ್ತಿ. ಅವರನ್ನು ಇನ್ನೂ ದೊಡ್ಡ ಶಕ್ತಿಯನ್ನಾಗಿ ಬೆಳೆಸಬೇಕಿದೆ.

Home add -Advt

ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಿದರೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹಕ್ಕೆ ನಾಂದಿಯಾಗುತ್ತದೆ ಎಂದರು. ಬಸವಣ್ಣನ ತತ್ವದ ಮೇಲೆ ನಾವು ನಡೆಯುತ್ತೇವೆ. ಹಾಗಾಗಿ ಜಾತಿರಾಜಕಾರಣಕ್ಕೆ ಅವಕಾಶವಿಲ್ಲ. ಸರ್ವ ಧರ್ಮೀಯರೂ ಸಮಾನರು ಎಂಬ ಜಾತ್ಯಾತೀತ ತತ್ವದ ಮೇಲೆ ಕಾಂಗ್ರೆಸ್ ಪಕ್ಷ ನಿಂತಿದೆ. ಚುನಾವಣೆಯಲ್ಲಿ ಯಶಸ್ಸು ಸಿಗುವುದು ಖಚಿತ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಷಡ್ಯಂತ್ರಗಳೆಲ್ಲ ನಡೆಯಲ್ಲ – ಸತೀಶ್ ಜಾರಕಿಹೊಳಿ

Related Articles

Back to top button