ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಾರ್ಪಾಡುಗೊಂಡಿರುವ 40 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗೆ ದಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಿಸಿಎಂ ಸವದಿ, ಕುಟುಂಬಸ್ತರೇ ದೂರ ಉಳಿಯುವ ಈ ಸಂಧರ್ಭದಲ್ಲಿ ಜೀವದ ಹಂಗನ್ನೂ ತೊರೆದು ದೇವರ ಸ್ಥಾನದಲ್ಲಿ ನಿಂತು ಜನಸೇವೆ ಮಾಡುತ್ತಿರುವ ಎಲ್ಲರಿಗೂ ಸರಕಾರದ ಪರವಾಗಿ ಧನ್ಯವಾದಗಳು, ಜೀವ ಜೀವನ ಎರಡನ್ನು ಉಳಿಸಿಕೊಂಡು ಹೋಗುಲು ಶ್ರಮಿಸಬೇಕಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಪ್ರತಿ ನಿತ್ಯ ರಾಜ್ಯದಲ್ಲಿ ಸುಮಾರು 50 ಸಾವಿರ ಕ್ಕಿಂತ ಹೆಚ್ಚು ಸೊಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಹೇಳಿದರು.
ಜನರು ಸ್ವತ: ಜಾಗೃತಿ ವಹಿಸಬೇಕಿದೆ. ಅನಗತ್ಯ ಓಡಾಡಟಕ್ಕೆ ತಡೆನೀಡಬೇಕು. ಜನರು ಜೀವದ ಜೊತೆಗೆ ಜೀವನದ ಹೊಣೆ ಹೊತ್ತು ಸರಕಾರದ ನಿಯಮಾವಳಿಗಳನ್ನು ತಪ್ಪದೆ ಪಾಲಿಸಬೇಕು. ರಾಜ್ಯದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆಕ್ಸಿಜನ್ ಪೂರೈಕೆ ಭರವಸೆ ನೀಡಿದೆ. ಅಥಣಿಯಲ್ಲಿ ನಿಪ್ಪಾಣಿಯಿಂದ ಆಕ್ಸಿಜನ್ ತೆಗೆದುಕೊಂಡು ಹೊಗುವದರಿಂದ ಅಲ್ಲಿನ ಹತ್ತಾರು ಜನರ ಪ್ರಾಣ ಸುರಕ್ಷಿತವಾಗಿರಲು ಸಾಧ್ಯವಾಯಿತು. ಸಹಕರಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಕೊರೊನಾ ಎರಡನೆ ಅಲೆ ಎದುರಿಸಲು ನಾವು ಸಜ್ಜರಾಗಬೆಕಿದ್ದು ಆ ನಿಟ್ಟಿನಲ್ಲಿ ಹಲವರ ಸಹಯೋಗದಲ್ಲಿ ಕೊರೋನಾ ಕೇಂದ್ರ ಸ್ಥಾಪಿಸಲಾಗಿದೆ. ಸರಕಾರದ ಜೊತೆಗೆ ನಾವೇಲ್ಲರು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಹೇಳಿದರು.
28 ಬೆಡ್ ಗಳನ್ನು ನಿಪ್ಪಾಣಿಯ ಗಾಂದಿ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಹೆಚ್ಚಿನ ರೊಗಿಗಳಿಗೆ ಜಿಲ್ಲೆ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಚಿಕಿತ್ಸೆ ಪಡೆಯಬಹುದು. ವೈದ್ಯರು ಜನರ ಸೇವೆಗೆ ಮುಂದೆ ಬಂದಿದ್ದಾರೆ. ಸುಮಾರು 40ಕ್ಕೂ ಹೆಚ್ಚು ವೈದ್ಯಕಿಯ ಸಿಬ್ಬಂದಿಗಳಿದ್ದಾರೆ. ಜೊಲ್ಲೆ ಉದ್ಯೋಗ ಸಮೂಹದಿಂದ ವೈದ್ಯರಿಗೆ ವೇತನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಬದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಯವಂತ ಭಾಟಲೆ, ಡಿ.ಎಚ್.ಒ ಮುನ್ಯಾಳೆ, ಸದ್ದಾಮ ನಗರಾಜಿ, ಚಂದ್ರಕಾಂತ ಕೊಠಿವಾಲೆ,ಎ.ಡಿ.ಎಚ್.ಒ ಎಸ್ ಎಸ್ ಗಡೇದ್,ಸಂಗಿತಾ ದೇಶಪಾಂಡೆ, ಬಲರಾಮ ಜಾಧವ, ಗೌರವ ಬಾಬರ, ಶೀತಲ ಕುಲಕರ್ಣಿ, ಇಲಾಖೆಯ ಸಿಬ್ಬಂದಿಗಳು, ವೈದ್ಯರು ಜ್ಯೋತಿ ಪ್ರಸಾದ ಜೊಲ್ಲೆ, ವೈದ್ಯಕಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಆಯಾಮ; ಸಂಸದ ತೇಜಸ್ವಿ ಸೂರ್ಯ ಬಂಧನಕ್ಕೆ ಡಿಕೆಶಿ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ