Kannada NewsLatest

ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರುಬೇಕು: ಪ್ರೊ. ತಳವಾರ ಸಾಬಣ್ಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಭಾಂಗಣದಲ್ಲಿ 20ರಂದು “ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗಕ್ಕೆ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು 2021-22ನೇ ಸಾಲಿನ ಅರ್ಥಶಾಸ್ತ್ರ ಸೊಸೈಟಿಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆಯನ್ನು ನೇರವೇರಿಸಿದ ವಿಧಾನ ಪರಿಷತ್ ಸದಸ್ಯ ಪ್ರೊ. ತಳವಾರ ಸಾಬಣ್ಣ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಇರಬೇಕು, ನಕರಾತ್ಮಕ ಆಲೋಚನೆಯಿಂದ ಹೊರಬರಬೇಕು. ಜೀವನದಲ್ಲಿ ಓದಬೇಕೆಂಬ ದಾಹ ಇರಬೇಕು ಮತ್ತು ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಹೆಚ್ಚಿರಬೇಕು. ಯಶಸ್ಸಿನ ದಾರಿ ಯಾವತ್ತೂ ಸುಲಭವಾಗಿರುವುದಿಲ್ಲ ಸತತ ಪ್ರಯತ್ನದಿಂದ ಗುರಿ ಮುಟ್ಟಬಹುದು ವಿದ್ಯಾರ್ಥಿಗಳಲ್ಲಿ ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಯನದಲ್ಲಿ ಅಂಕಗಳು ಮುಖ್ಯವಲ್ಲ ಜ್ಞಾನ ಗಳಿಸುವುದು ಮುಖ್ಯ, ಜ್ಞಾನ ಗಳಿಸುವ ಹಸಿವು-ಹಂಬಲ ಇರಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಸಾಮಾನ್ಯ ಅರ್ಥಶಾಸ್ತçದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳುತ್ತ ಸಂಶೋಧನೆಯಿAದಲೇ ಜ್ಞಾನದ ವಿಸ್ತಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ತಮ್ಮ ಶಾಸಕರ ಅನುದಾನದಡಿಯಲ್ಲಿ ರೇಣುಕಾನಗರ, ವಂಟಮೂರಿ ಕಾಲನಿ, ಯಮನಾಪುರ ಮುಂತಾದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ರೂ. 33 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ. ಡಿ. ಎನ್. ಪಾಟೀಲ, ಇವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಸಾಧ್ಯವೆಂಬುದು ಮೂರ್ಖರ ಶಬ್ದಕೋಶದಲ್ಲಿರುತ್ತದೆ. ಯುವಜನಾಂಗದಲ್ಲಿ ಅದ್ಭುತಶಕ್ತಿ ಇದ್ದು, ವರ್ಕ್ ಕಲ್ಚರ್, ವರ್ಕ್ ಕಮಿಟ್ ಮೆಂಟ್ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಸಹಾಯಕ ಪ್ರಾಧ್ಯಾಪಕರಾದ ಡಾ. ಕಿರಣ ಕುಮಾರ ಪಿ, ಇವರು ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ಗಾಯತ್ರಿ ತಳವಾರ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸಿದರು, ರಮೇಶ ಭರಮವಡೆಯರ ಹಾಗೂ ಕುಮಾರಿ. ರೂಪಾ ಸುತಾರ ನಿರೂಪಣೆ ಮಾಡಿದರು, ಇಂದ್ರತೇಜ ನಡೋಣಿ, ವಂದನಾರ್ಪಣೆ ಸಮರ್ಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕುಮಾರಿ. ದೀಪಾ ಹಂಜೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button